KARNATAKA
ಅಮಾಯಕ ಜನರ ಬಲಿಪಡೆಯುವ ಪಿಎಸಿಎಲ್ ನಂತಹ ಬ್ಲೇಡ್ ಕಂಪನಿಗಳ ಮೇಲೆ ಕ್ರಮಕ್ಕೆ ಸುನೀಲ್ ಕುಮಾರ್ ಆಗ್ರಹ
ಪಿಎಸಿಎಲ್ ನಂತಹ ಹಲವಾರು ಬ್ಲೇಡ್ ಕಂಪೆನಿಗಳು ಬಡವರ ಬದುಕಿನ ಕನಸಿನ ಗೋಪುರ ಕಟ್ಟುವ ಮೋಸದ ಜಾಲವನ್ನು ಹೆಣೆದು ಹಲವು ಸ್ಕೀಮ್ ಗಳ ಹೆಸರಲ್ಲಿ ಜನರಿಂದ ಹೂಡಿಸಿದ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗುತ್ತಿದೆ.
ಮಂಗಳೂರು : ಪಿಎಸಿಎಲ್ ನಂತಹ ಹಲವಾರು ಬ್ಲೇಡ್ ಕಂಪೆನಿಗಳು ಬಡವರ ಬದುಕಿನ ಕನಸಿನ ಗೋಪುರ ಕಟ್ಟುವ ಮೋಸದ ಜಾಲವನ್ನು ಹೆಣೆದು ಹಲವು ಸ್ಕೀಮ್ ಗಳ ಹೆಸರಲ್ಲಿ ಜನರಿಂದ ಹೂಡಿಸಿದ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗುತ್ತಿದೆ.
ದೇಶದ ಆಳುವ ಸರಕಾರಗಳ ತಪ್ಪಾದ ಆರ್ಥಿಕ ನೀತಿಗಳು ಇಂತಹ ಬ್ಲೇಡ್ ಕಂಪೆನಿಗಳು ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾರ್ಮಿಕ ಮುಖಂಡರೂ, ಪಿಎಸಿಎಲ್ ಎಜೆಂಟರ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ,
ಅವರು ಸೋಮವಾರ ನಗರದ ಮಿನಿ ವಿಧಾನಸೌಧದ ಮುಂಭಾಗ ಪಿಎಸಿಎಲ್ ನಿಂದ ಹೂಡಿಕೆದಾರರಿಗಾದ ಅನ್ಯಾಯವನ್ನು ಖಂಡಿಸಿ, ಪಿಎಸಿಎಲ್ ನಿಂದ ಹಣ ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ ನ್ಯಾಯಯುತ ಸಿಗಬೇಕಾದ ಮೊತ್ತವನ್ನು ಮರುಪಾವತಿಲು ಒತ್ತಾಯಿಸಿ, ಸಂತ್ರಸ್ತ ಹೂಡಿಕೆದಾರರಿಗೆ ಪರಿಹಾರ ವಿತರಿಸದ ಸಿಬಿಯ ನೀತಿಯ ವಿರುದ್ಧ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ದೇಶದ ಎಲ್ಲಾ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿಯ)ಪ್ರಾದೇಶಿಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ.ಸಂತ್ರಸ್ತ ಹೂಡಿಕೆದಾರರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.
ಸೆಬಿಯ ಪ್ರಾದೇಶಿಕ ಕಚೇರಿ ಮೂಲಕ ಜಿಲ್ಲಾ ಮಟ್ಟದ ಅದಾಲತ್ ನಡೆಸಿ ಹಣ ಕಳೆದುಕೊಂಡ ಸಂತ್ರಸ್ತರ ಸಮಗ್ರ ಮಾಹಿತಿ ದಾಖಲಿಸಬೇಕು.
ಜಸ್ಟಿಸ್ ಲೋಧಾ ಕಮಿಟಿಯ ತನಿಖಾ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಬೇಕು ಮತ್ತು ಕಮಿಟಿಯ ಶಿಫಾರಸ್ಸು ಮತ್ತು ಪರಿಹಾರಗಳ ಬಗ್ಗೆ ಹಾಗೂ pacl ಕಂಪೆನಿಯಿಂದ ಮುಟ್ಟುಗೊಲು ಹಾಕಿರುವ 872 ಪ್ರಾಪರ್ಟಿಗಳ ಮೌಲ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಆಗಬೇಕೆಂದು ಆಗ್ರಹಿಸಿದ ಅವರು,ದ.ಕ ಜಿಲ್ಲೆಯಲ್ಲಿ ಸಾವಿರಾರು ಜನರು ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ.
ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಸಂಸತ್ತಿನಲ್ಲಿ ಜಿಲ್ಲೆಯ ಸಂತ್ರಸ್ತ ಹೂಡಿಕೆದಾರರ ಪರವಾಗಿ ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್ , ಮಾಜಿ ಕಾರ್ಪೊರೇಟರ್ ಮಹಿಳಾಪರ ಸಂಘಟನೆಯ ಮುಖಂಡರಾದ ಜಯಂತಿ ಬಿ ಶೆಟ್ಟಿ, ಭಾರತೀ ಬೋಳಾರ,PACL ಏಜೆಂಟರ ಹೋರಾಟ ಸಮಿತಿಯ ಮುಖಂಡರಾದ ತೆಲ್ಮಾ ಮೊಂತೆರೋ,ಅಸುಂತ ಡಿಸೋಜ, ನ್ಯಾನ್ಸಿ ಫೆರ್ನಾಂಡಿಸ್,ಶಾಲಿನಿ,ವಾಯಿಲೆಟ್,ಶ್ಯಾಮಲ,ಅರುಣಾ, ದಾಮೋದರ ಉಳ್ಳಾಲ ಮುಂತಾದವರು ಭಾಗವಹಿಸಿದ್ದರು.