Connect with us

LATEST NEWS

ಬೇರೆಯವರ ಹೇಳಿಕೆಯಿಂದ ನಾವು ರಿಚಾರ್ಜ್ ಆಗುವುದಿಲ್ಲ – ಸುನಿಲ್ ಕುಮಾರ್

ಉಡುಪಿ ಮೇ 02: ಪಕ್ಷದಲ್ಲಿ ಹೊಸತನಕ್ಕೆ ಆದ್ಯತೆ ನೀಡಲಾಗುತ್ತದೆ ಎಂಬ ಸಂತೋಷ್ ಜಿ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಪಕ್ಷದ ರೀ ಚಾರ್ಜಿಂಗ್ ಸೆಂಟರ್ ನಮ್ಮ ಕಾರ್ಯಕರ್ತನ ಕೈಯಲ್ಲಿದ್ದು, ಯಾರ ಹೇಳಿಕೆಗಳ ಮೂಲಕ ನಾವು ರಿಚಾರ್ಜ್ ಆಗುವುದಿಲ್ಲ ಎಂದಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬೂತ್ ಮತ್ತು ಕಾರ್ಯಕರ್ತರನ್ನು ರಿಚಾರ್ಜ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ, ಯಾರ ಹೇಳಿಕೆಗಳ ಮೂಲಕ ನಾವು ರಿಚಾರ್ಜ್ ಆಗುವುದಿಲ್ಲ. ನಮ್ಮ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಿಚಾರ್ಜ್ ಆಗುತ್ತಾರೆ. ಹೊಸತನ ನಮ್ಮ ಸಂಘಟನೆಯ ಮೂಲ ಸ್ವರೂಪದಲ್ಲಿದೆ, ಪ್ರತಿಯೊಬ್ಬ ಕಾರ್ಯಕರ್ತ ನಲ್ಲಿ ಹೊಸತನ ಇದೆ. ಕಾರ್ಯಕರ್ತರ ಹೊಸತನವನ್ನು ಸಂಘಟನೆಗೆ ಸಮಾಜಕ್ಕೆ ಪೂರಕವಾಗಿ ಬಳಸುತ್ತೇವೆ ಎಂದರು. ಅಲ್ಲದೆ ನಮ್ಮ ಸಂಘಟನೆಗಳಲ್ಲಿ ಇರುವಷ್ಟು ಹೊಸತನ ಬೇರೆ ಯಾವ ಸಂಘಟನೆಯಲ್ಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ, ನಮ್ಮಲ್ಲಿ ಹೊಸತನಗಳಿಗೆ ಅವಕಾಶವನ್ನೂ ಕೊಡುತ್ತಾರೆ. ಹೊಸತನಕ್ಕೆ ಅವಕಾಶ ನಿರಂತರವಾದ ಪ್ರಕ್ರಿಯೆಯಾಗಿದ್ದು, ಹಳೇಬೇರು ಹೊಸಚಿಗುರು ಇದ್ದರೇನೇ ಒಳ್ಳೆಯದು ಎನ್ನುವ ಗಾದೆ ರೀತಿಯಾಗಿದ್ದು, ಕಾಂಗ್ರೆಸ್ ಥರ ನಾವು ಒಂದೇ ಮರಕ್ಕೆ ಜೋತು ಬೀಳುವವರಲ್ಲ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *