ಡಿಸೆಂಬರ್ ಅಂತ್ಯದೊಳಗೆ ಪ್ರಳಯ : ವಿಜ್ಞಾನಿಯಿಂದ ಪ್ರಧಾನಿಗೆ ಪತ್ರ
ಡಿಸೆಂಬರ್ ಅಂತ್ಯದೊಳಗೆ ಪ್ರಳಯ : ವಿಜ್ಞಾನಿಯಿಂದ ಪ್ರಧಾನಿಗೆ ಪತ್ರ
ಬೆಂಗಳೂರು, ಸೆಪ್ಟೆಂಬರ್ 28 : ಡಿಸೆಂಬರ್ 31ರೊಳಗೆ ಪ್ರಳಯ ಸಂಭವಿಸಲಿದ್ದು ಭಾರತವೂ ಸೇರಿ 11 ದೇಶಗಳಿಗೆ ತೊಂದರೆಯುಂಟಾಗಲಿದೆ ಎಂದು ಕೇರಳದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ.
ಭೂಪದರಗಳ ಒಳಗೆ ಚಟುವಟಿಕೆ ನಡೆಯುತ್ತಿದ್ದು, ಹಿಂದು ಮಹಾಸಾಗರದಾಳದಲ್ಲಿ ಭೂಕಂಪವುಂಟಾಗಿ ಅದರ ಬೆನ್ನಲ್ಲೇ ಸುನಾಮಿಯಾಗಲಿದೆ.
ಸುನಾಮಿ ನಂತರ ಮಹಾ ಚಂಡಮಾರುತ ಸಂಭವಿಸಲಿದೆಯಂತೆ ಎಂದು ಕೇರಳದ ವಿಜ್ಞಾನಿ ಬಾಬು ಕಲಾಯಿಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪತ್ರವು ಸೆ.20ಕ್ಕೆ ಪ್ರಧಾನಿಯವರ ಕೈಸೇರಿದೆ.
ಕಲಾಯಿಲ್ ಅವರು ಬಿ.ಕೆ. ರಿಸರ್ಚ್ ಅಸೋಸಿಯೇಷನ್’ನ ನಿರ್ದೇಶಕರಾಗಿದ್ದು, ನಿಖರವಾದ ವೈಜ್ಞಾನಿಕ ವಿಶ್ಲೇಷಣೆ ನೀಡುವಲ್ಲಿ ಪರಿಣಿತಿ ಪಡೆದಿದ್ದಾರೆ. ಇವರು ಬರೆದ ಪತ್ರದ ಪ್ರಕಾರ ಈ ಭಯಾನಕ ಭೂಕಂಪನದಿಂದ ಏಷ್ಯಾದ ಕರಾವಳಿ ಪ್ರದೇಶಗಳಿಗೆ ಹಾನಿಯುಂಟಾಗಲಿದೆ.
ಸಮುದ್ರತೀರದ ರೇಖೆಯಲ್ಲಿ ಭಾರೀ ಬದಲಾವಣೆಯಾಗಲಿದೆ. ಭಾರತವಲ್ಲದೆ ಚೈನಾ, ಜಪಾನ್, ಪಾಕಿಸ್ತಾನ,ನೇಪಾಳ, ಬಾಂಗ್ಲಾದೇಶ, ಥೈಲ್ಯಾಂಡ್, ಅಫ್ಘಾನಿಸ್ತಾನ, ಶ್ರೀಲಂಕಾ, ಗಲ್ಫ್ ದೇಶ ಸೇರಿದಂತೆ ಒಟ್ಟು 11 ದೇಶಗಳು ತೊಂದರೆ ಅನುಭವಿಸಲಿದೆ. ಏಷ್ಯಾ ಖಂಡದ ಭೂ ನಕ್ಷೆಯೇ ಬದಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಬಾಬು ಭವಿಷ್ಯ ನಿಜವಾಗಿತ್ತು :
2004ರ ಸುನಾಮಿಯನ್ನು ಅಂದಾಜಿಸಿದ್ದ ಬಾಬು ಸುನಾಮಿಯು 120 ಕಿ.ಮೀ’ನಿಂದ 180 ಕಿ.ಮೀ ವೇಗವಾಗಿ ಬರಲಿದ್ದು, ಕರಾವಳಿ ಪ್ರದೇಶಗಳೆಲ್ಲಾ ನಿರ್ನಾಮವಾಗಲಿದೆಯಂತೆ. ‘ಸೀಶ್ಮಾ’ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಇಎಸ್ಪಿ ಸಹಾಯದಿಂದ ಬಾಬು ಮತ್ತವರ ತಂಡ ಈ ಮಾಹಿತಿ ಕಂಡುಕೊಂಡಿದೆ.
ಬಾಬು ಅವರು 2004ರ ಚೆನ್ನೈ ಸುನಾಮಿಯನ್ನು ಮೊದಲೇ ಅಂದಾಜಿಸಿ ಮುನ್ನೆಚ್ಚರಿಕೆ ಕೈಗೊಳ್ಳಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಾಬು ಈವರೆಗೆ ಅಂದಾಜಿಸಿದ್ದು ಯಾವುದೂ ಸುಳ್ಳಾಗಿಲ್ಲ. 2001ರಲ್ಲೇ ಮಂಗಳ ಗ್ರಹದಲ್ಲಿ ನೀರಿದೆ ಎಂದಿದ್ದರು ಬಾಬು.