DAKSHINA KANNADA
ಪ್ರತೀಕಾರದ ಹೇಳಿಕೆ – ಹಿಂದೂ ಮುಖಂಡ ಭರತ್ ಕುಮ್ಡೇಲು ವಿರುದ್ಧ ಪ್ರಕರಣ ದಾಖಲು

ಪುತ್ತೂರು ಮೇ 10: ಇತ್ತೀಗೆ ಬಜ್ಪೆಯಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರತೀಕಾರದ ಹೇಳಿಕೆ ನೀಡಿದ ಹಿಂದೂ ಮುಖಂಡ ಭರತ್ ಕುಮ್ಡೇಲು ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಜೈನ ಭವನದಲ್ಲಿ ನಡೆದ ಸುಹಾಸ್ ಶೆಟ್ಟಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಭರತ್ ಕುಮ್ಡೇಲು ಸುಹಾಸ್ ಹತ್ಯೆಯಂತಹ ಹತ್ಯೆಗಳು ಈ ಹಿಂದೆಯೂ ನಡೆದಿದೆ. ಆದರೆ ಸುಹಾಸ್ ನನ್ನು ಅತ್ಯಂತ ಬರ್ಭರವಾಗಿ ಮಾಡಿದ್ದಾರೆ. ಈ ಹತ್ಯೆಯ ವಿಡಿಯೋ ನೋಡಿದ ಬಳಿಕ ಹಿಂದೂ ತಾಯಂದಿರುವ ಭಯ ಪಟ್ಟಿದ್ದಾರೆ. ಆದರೆ ಇಂಥ ಹತ್ಯೆಗಳು ಹಿಂದೂ ಸಮಾಜಕ್ಕೆ ಹೊಸದೇನಲ್ಲ. ಮುಖದಲ್ಲಿ ಒಂದು ಸ್ಟಿಚ್ ಹಾಕಲೂ ಜಾಗವಿಲ್ಲದಂತೆ ಕಡಿದ ಹಿಂದೂಗಳು ಇಲ್ಲಿದ್ದಾರೆ. ಸಾಮಾನ್ಯವಾಗಿ ಹಿಂದೂ ಕಾರ್ಯಕರ್ತನ ಹತ್ಯೆ ನಡೆದರೆ ಕೆಲವೇ ದಿನಗಳಲ್ಲಿ ಇನ್ನೊಂದು ಹತ್ಯೆ ನಡೆಯುತ್ತಿತ್ತು. ಆದರೆ ಸುಹಾಸ್ ಹತ್ಯೆಯ ಬಳಿಕ ಪ್ರತೀಕಾರ ನಡೆದಿಲ್ಲ.

ಸುಹಾಸ್ ನನ್ನು ಯಾವ ರೀತಿ ಹತ್ಯೆ ಮಾಡಬೇಕು ಅದೇ ರೀತಿಯ ಹತ್ಯೆ ನಡೆಯಬೇಕು, ಎಲ್ಲವನ್ನೂ ಹಿಂದೂ ಸಮಾಜ ಸಹಿಸಿ ಕುಳಿತುಕೊಳ್ಳಲು ಇದು ಕಾಶ್ಮೀರವಲ್ಲ, ಮಂಗಳೂರು. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ,ಮಹಿಳೆಯರ ಅತ್ಯಾಚಾರ ನಡೆದರೂ ಸಹಿಸಿ ಕೂರಬೇಕಾದ ಪರಿಸ್ಥಿತಿ ಇದೆ. ಆದರೆ ಮಂಗಳೂರಿನಲ್ಲಿ ಇದು ನಡೆಯಲ್ಲ ಎಂದರು. ಸುಹಾಸ್ ಹತ್ಯೆ ಪ್ರಕರಣದಲ್ಲಿ ಸ್ಪೀಕರ್ ಯು.ಟಿ.ಖಾದರ್ ರನ್ನು ಪೋಲೀಸರು ತನಿಖೆ ಮಾಡಬೇಕು. ಅವರಿಗೆ ಈ ಹತ್ಯೆ ನಡೆಯುವ ವಿಚಾರ ಮೊದಲೇ ತಿಳಿದಿದೆ ಭರತ್ ಕುಮ್ಡೇಲು ಆರೋಪಿಸಿದ್ದಾರೆ. ಭರತ್ ಕುಮ್ಡೇಲು ವಿಡಿಯೋ ವೈರಲ್ ಆಗುತ್ತಿದ್ದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.