DAKSHINA KANNADA
ಸುಳ್ಯ: ಭಾರೀ ಮಳೆಗೆ ಗುಡ್ಡ ಕುಸಿತ, ಸಂಚಾರ ಅಸ್ತವ್ಯಸ್ಥ

ಸುಳ್ಯ, ಜುಲೈ 06: ಕರಾವಳಿ ಭಾಗದಲ್ಲಿ ಕೆಳ ದಿನಗಳಿಂದ ಭಾರೀ ಮಳೆಯಾಗಿತಿದ್ದು, ಸುಳ್ಯದಿಂದ ಕೇರಳ ಸಂಪರ್ಕಿಸುವ ರಸ್ತೆಗೆ ಗುಡ್ಡ ಕುಸಿದು ಬಿದ್ದ ಘಟನೆ ನಡೆದಿದೆ.
ಸುಳ್ಯದಿಂದ ಕೇರಳ ಸಂಪರ್ಕಿಸುವ ದಕ್ಷಿಣಕನ್ನಡ ಗಡಿಭಾಗ ಪಾಣತ್ತೂರು ಎಂಬಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಸುಮಾರು ಒಂದು ಗಂಟೆಗೂ ಮಿಕ್ಕಿ ವಾಹನ ಸಂಚಾರ ಬಂದ್ ಆದ ಘಟನೆ ನಡೆದಿದೆ. ರಸ್ತೆಗೆ ಬಿದ್ದ ಮಣ್ಣನ್ನು ಸ್ಥಳೀಯರು ತೆರವುಗೊಳಿಸಿದ್ದು, ಗುಡ್ಡ ಇನ್ನಷ್ಟು ಕುಸಿಯುವ ಆತಂಕದಲ್ಲಿ ಸಾರ್ವಜನಿಕರು ಇದ್ದಾರೆ.
