DAKSHINA KANNADA
ಬ್ಯಾಂಕಾಕ್ ನಲ್ಲಿ ನಿಗೂಢವಾಗಿ ಸಾವನಪ್ಪಿದ ಸುಳ್ಯ ಮೂಲದ ಯುವಕ

ಸುಳ್ಯ ಮಾರ್ಚ್ 18: ಈಜಿಪ್ಟ್ ನಲ್ಲಿ ಶಿಪ್‍ನಲ್ಲಿ ಕೆಲಸಕ್ಕೆ ನೇಮಕಗೊಂಡಿದ್ದ ಯುವಕ ಬ್ಯಾಂಕಾಕ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಸುಳ್ಯದ ಪಂಬೆತ್ತಾಡಿಯ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್(26) ಎಂದು ಗುರುತಿಸಲಾಗಿದೆ.
ಈಜಿಪ್ಟ್ ನಲ್ಲಿ ಶಿಪ್‍ನಲ್ಲಿ ಉದ್ಯೋಗಕ್ಕೆ ನೇಮಕ ಗೊಂಡು ಅಲ್ಲಿಗೆ ತೆರಳಲು ವಿಮಾನ ಪ್ರಯಾಣಕ್ಕಾಗಿ ಬ್ಯಾಂಕಾಕ್‍ನಲ್ಲಿ ರೂಮ್‍ವೊಂದನ್ನು ಮಾಡಿ ತಂಗಿದ್ದರು. ಅಲ್ಲಿ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರಿಗೆ ತಾಯಿ, ಸಹೋದರ ಇದ್ದಾರೆ.

Pingback: `ಮಚ್ಚಾ’ ಎಂದಿದ್ದಕ್ಕೆ ಮಚ್ಚಾನನ್ನು ಕರೆದು ಚಾಕುವಿನಿಂದ ಇರಿದ - themangaloremirror.in