SULLIA
ಸುಳ್ಯ : ರಬ್ಬರ್ ಟ್ಯಾಪಿಂಗ್ ಕಾರ್ಯವೇಳೆ ಕಾಡು ಹಂದಿ ದಾಳಿ, ಮಹಿಳೆ ಗಂಭೀರ..!!
ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ವೇಳೆ ಕಾಡು ಹಂದಿ ತಿವಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬುಧವಾರ ನಡೆದಿದೆ.
ಸುಳ್ಯ : ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ವೇಳೆ ಕಾಡು ಹಂದಿ ತಿವಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬುಧವಾರ ನಡೆದಿದೆ.
ಸುಳ್ಯ ತಾಲೂಕಿನ ದುಗ್ಗಲಡ್ಕ ದಲ್ಲಿ ಈ ಘಟನೆ ನಡೆದಿದ್ದು ಕೆಎಫ್ ಡಿಸಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಕೂಟೇಲು ಸಿಆರ್ ಸಿ ಯ ಅಂಬಿಕಾ ಎಂಬವರು ದುಗ್ಗಲಡ್ಕ ರಬ್ಬರ್ ತೋಟದಲ್ಲಿ ಇಂದು ಮುಂಜಾನೆ ಸುಮಾರು 7 ಗಂಟೆ ಹೊತ್ತಿಗೆ ಟ್ಯಾಪಿಂಗ್ ಕಾರ್ಯ ನಡೆಸುತ್ತಿದ್ದರು. ಈ ಸಮಯದಲ್ಲಿ ಪೊದೆಗಳ ಮಧ್ಯೆಯಿದ್ದ ಕಾಡುಹಂದಿಯೊಂದು ಏಕಾಏಕಿ ಬಂದು ಮಹಿಳೆಗೆ ತಿವಿದಿದೆ, ಹಂದಿಯ ತಿವಿತದಿಂದ ಮಹಿಳೆ ಗಾಯಗೊಂಡಿದ್ದು,ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೆಎಫ್ ಡಿ ಸಿ ರಬ್ಬರ್ ಪ್ಲಾಂಟೇಷನ್ ಗಳಲ್ಲಿ ಪೊದೆ, ಕರುಚಲು ಗಿಡಗಂಟಿಗಳು ಬೆಳೆದಿದ್ದು ಕಾಡು ಪ್ರಾಣಿಗಳಿಗೆ ಯೋಗ್ಯ ವಾಸಸ್ಥನವಾಗಿದೆ. ಆದ್ದರಿಂದ ಇಲ್ಲಿ ದುಡಿಯುವ ಕಾರ್ಮಿಕರು ಭಯದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕರು ದೂರಿಕೊಂಡಿದ್ದಾರೆ.