DAKSHINA KANNADA
ಕೇನ್ಯ ಕಣ್ಕಲ್ ಹೊಳೆಯಲ್ಲಿ ನೀರು ಪಾಲಾದ ಇಬ್ಬರು ಬಾಲಕಿಯರು
ಸುಬ್ರಹ್ಮಣ್ಯ ಮೇ 08: ಇಬ್ಬರು ವಿಧ್ಯಾರ್ಥಿನಿಯರು ಬಳ್ಪ ಸಮೀಪದ ಕೇನ್ಯ ಕಣ್ಕಲ್ ಎಂಬಲ್ಲಿ ಹೊಳೆಯಲ್ಲಿ ನೀರುಪಾಲಾದ ಘಟನೆ ನಡೆದಿದ್ದು, ಇಬ್ಬರು ಬಾಲಕಿಯರ ಮೃತದೇಹವನ್ನು ಹೊರ ತೆಗೆಯಲಾಗಿದೆ.
ಬೆಂಗಳೂರಿನ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಆವಂತಿಕಾ (16) ಹಾಗೂ ಅಂಕಿತಾ (13) ಮೃತರು. ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಿಂದ ಹೊರಗೆ ತೆಗೆದಿದ್ದಾರೆ.
ಕೇನ್ಯ ಉದಯ ಅಮ್ಮಣ್ಣಾಯ ಅವರ ಸಹೋದರ ಸತೀಶ್ ಅಮ್ಮಣ್ಣಾಯ ಅವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. ಸತೀಶ್ ಅವರ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ರಜೆ ಇದ್ದುದರಿಂದ ಬಳ್ಪದ ಚಿಕ್ಕಪ್ಪನ ಮನೆಗೆ ಸೋಮವಾರ ಬೆಳಿಗ್ಗೆ ಬಂದಿದ್ದರು.
ಮನೆ ಸಮೀಪವೇ ಇರುವ ಕುಮಾರಧಾರ ನದಿಗೆ ಸಂಜೆ ವೇಳೆಗೆ ಕುಟುಂಬದವರ ಜೊತೆಗೆ ತೆರಳಿದ್ದರು. ಈ ವೇಳೆ ಹೆಣ್ಣು ಮಕ್ಕಳಿಬ್ಬರು ನೀರಿಗೆ ಇಳಿದಿದ್ದು, ಮುಳುಗಿ ನಾಪತ್ತೆಯಾಗಿದ್ದರು.
ಇದು ಗಮನಕ್ಕೆ ಬರುತ್ತಿದ್ದಂತೆಯೇ ಮನೆಮಂದಿ ನೀರಿನಲ್ಲಿ ಹುಡುಕಿದ್ದರು. ಸ್ಥಳೀಯ ಈಜುಗಾರರೂ ನದಿ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದ್ದರು. ಸುಳ್ಯದಿಂದ ಅಗ್ನಿಶಾಮಕ ದಳವನ್ನು ಕರೆಸಿ ನೀರಿನಲ್ಲಿ ಶೋಧ ನಡೆಸಲಾಯಿತು. ರಾತ್ರಿ ವೇಳೆ ಇಬ್ಬರ ಮೃತದೇಹಗಳು ಪತ್ತೆಯಾದವು.