ಸುಳ್ಯ ಡಿಸೆಂಬರ್ 12: ಬೇರೆ ಯುವತಿಯೊಂದಿಗೆ ಲಾಡ್ಜ್ ನಲ್ಲಿ ತಂಗಿದ್ದ ಪತಿಯನ್ನು ಸಾರ್ವಜನಿಕವಾಗಿಯೇ ಪತ್ನಿ ತರಾಟೆಗೆ ತೆಗೆದುಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

ವಿವಾಹಿತ ಯುವಕ ಮತ್ತೊಂದು ಯುವತಿ ಜೊತೆ ಲಾಡ್ಜ್ ನಲ್ಲಿ ತಂಗಿದ್ದ, ಈ ವಿಚಾರ ತಿಳಿದು ಸೀದಾ ಲಾಡ್ಜ್ ಗೆ ಆಗಮಿಸಿದ ಪತ್ನಿ, ಗಂಡ ಹಾಗೂ ಆತನ ಜೊತೆಗಿದ್ದ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಇವರ ಬೊಬ್ಬೆ ಕೇಳಿ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದರು.ಬಳಿಕ ಕೋಪಗೊಂಡಿದ್ದ ಪತ್ನಿಯನ್ನು ಯುವಕ ಸಮಾಧಾನಪಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ.

ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ ಮಹಿಳೆ ಆ ಯುವತಿಯನ್ನು ಹಿಡಿದು ನಿಲ್ಲಿಸಿ ತನ್ನ ಕೋಪವನ್ನು ಹೊರ ಹಾಕುತ್ತಿದ್ದರು. ಬಳಿಕ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.