DAKSHINA KANNADA
ಸುಳ್ಯ – ಕಾಡಾನೆ ಕಾಟಕ್ಕೆ ಕಂಗಾಲಾದ ರೈತರು

ಸುಳ್ಯ ಜನವರಿ 08: ಕಾಡಾನೆಗಳ ಕಾಟಕ್ಕೆ ಸುಳ್ಯ ಪರಿಸರದ ರೈತರು ಕಂಗಾಲಾಗಿದ್ದು, ಕಾಡಾನೆಗಳ ಹಿಂಡು ಶನಿವಾರ ರಾತ್ರಿ ಮಂಡೆಕೋಲು ಮತ್ತು ಜಾಲ್ಸೂರು ಗ್ರಾಮದ ಕೃಷಿಕರ ತೋಟಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ.
ನಂಗಾರಿನ ಕೃಷಿಕ ರವಿಶಂಕರ್ ಭಟ್ ಅವರ ತೋಟದಲ್ಲಿ ಐದು ತೆಂಗಿನ ಮರ, ಅಡಿಕೆ, ಬಾಳೆ ಕೃಷಿ ನಾಶಗೊಳಿಸಿದೆ. ಮಂಡೆಕೋಲಿನ ಸುತ್ತಮುತ್ತಲಿನ ಕಾಡುಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು ಶನಿವಾರ ರಾತ್ರಿ ಕೃಷಿ ತೋಟಕ್ಕೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದೆ. ಅಕ್ಕಪ್ಪಾಡಿಯ ಅಪ್ಪಯ್ಯ ಮಣಿಯಾಣಿ ಹಾಗೂ ವಿಶ್ವನಾಥ ಎಂಬವರ ತೋಟಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟಿದೆ. ಪರಿಣಾಮ ಅಡಿಕೆ, ಬಾಳೆ ಗಿಡ, ತೆಂಗು ಗಿಡಗಳನ್ನು ಪುಡಿಗಟ್ಟಿದೆ.
ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಕೃಷಿಕರ ತೋಟಗಳಿಗೆ ದಾಳಿ ನಡೆಸುತ್ತಿದೆ,
