Connect with us

DAKSHINA KANNADA

ಭಜರಂಗದಳ ಕಾರ್ಯಕರ್ತಕರ ನೈತಿಕ ಪೊಲೀಸ್ ಗಿರಿ – ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಎಂಬ ತಪ್ಪು ಮಾಹಿತಿಗೆ ಬಸ್ ತಡೆದು ಪ್ರಯಾಣಿಕರಿಗೆ ಕಿರುಕುಳ

ಸುಳ್ಯ ಅಗಸ್ಟ್ 21: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಹಿಂದೂ ಮುಸ್ಲಿಂ ಯುವಕ-ಯುವತಿ ಜತೆಗೆ ಪ್ರಯಾಣಿಸ್ತಿದ್ದಾರೆಂದು ತಪ್ಪು ತಿಳಿದ ಬಜರಂಗ ದಳದ ಕಾರ್ಯಕರ್ತರು ಬಸ್‌ ಮೇಲೆ  ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಆನೆಗುಂಡಿಯಲ್ಲಿ ಘಟನೆ ನಡೆದಿದ್ದು, ಇದೊಂದು ತಪ್ಪು ಮಾಹಿತಿ ಎಂದು ತಿಳಿದ  ಬಳಿಕ ಸುಳ್ಯ ಠಾಣೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.


ಪುತ್ತೂರಿಗೆ ಕೆಲಸದ ನಿಮಿತ್ತ ಬಂದಿದ್ದ ಬೆಂಗಳೂರು ಮೂಲದ ಯುವತಿಯರಿಬ್ಬರು ಬಸ್ಸಿನ ಚಾಲಕನ ಬದಿಯ ಅಡ್ಡ ಸೀಟಿನಲ್ಲಿ ಕುಳಿತಿದ್ದರು. ಚಾಲಕನ ಅದೇ ಬಸ್ಸಲ್ಲಿ ಕುಂಬ್ರದವರೆಗೆ ಬರಲು ಬೆಳ್ಳಾರೆ ಸಮೀಪದ ನೌಶಾದ್‌ ಎಂಬಾತ ಹತ್ತಿದ್ದ. ಪ್ರಯಾಣದ ವೇಳೆ ಯುವತಿಯರಿಬ್ಬರ ಜೊತೆಗೆ ಯುವಕ ಮಾತುಕತೆ ನಡೆಸಿದ್ದು, ಮೊಬೈಲ್ ಪೋನ್ ಸಂಖ್ಯೆ ಪಡೆದುಕೊಂಡು ಚಾಟಿಂಗ್ ನಡೆಸುತ್ತಿದ್ದರು ಎಂದು ಸಂಶಯ ವ್ಯಕ್ತಪಡಿಸಿ ಬಸ್ಸಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಬಜರಂಗದಳದ ಕಾರ್ಯಕರ್ತರು ಆರೋಪಿಸಿ ಬಸ್ಸಿನಲ್ಲೇ ಯುವಕನನ್ನು ತರಾಟೆಗೈದು ಆತನ ಮೊಬೈಲ್ ಪೋನ್ ಕಿತ್ತುಕೊಂಡಿದ್ದಾರೆ.


ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಪಡೆದಿದ್ದ ಯುವಕ, ಕುಂಬ್ರದಲ್ಲಿ ಇಳಿಯದೆ ಬೆಂಗಳೂರಿಗೆ ಟಿಕೆಟ್ ಪಡೆದಿರುವ ವಿಚಾರದ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪುತ್ತೂರಿನ ಬಜರಂಗದಳ ಕಾರ್ಯಕರ್ತರು ಮಾಹಿತಿ ಪಡೆದು ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಲು ಆರಂಭಿಸಿದ್ದರು. ಇದರಿಂದ ಗಾಬರಿಗೊಂಡ ಯುವಕ ಜಾಲ್ಸೂರು ಬಳಿ ಬಸ್ಸಿನಿಂದ ಇಳಿಯಲು ಯತ್ನಿಸಿದಾಗ ಬಜರಂಗದಳ ಕಾರ್ಯಕರ್ತರು ಆತನನ್ನು ಇಳಿಯದಂತೆ ತಡೆದು ಸುಳ್ಯ ಪೊಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಿದ್ದರು. ವಿಚಾರ ತಿಳಿದು ಯುವಕನ ಪರವಾಗಿಯೂ ಗುಂಪೊಂದು ಜಮಾಯಿಸಿ ಮಾತಿನ ಚಕಮಕಿ ನಡೆದಿದೆಯೆನ್ನಲಾಗಿದೆ.


ಪೈಚಾರ್‌ನಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸುವುದಕ್ಕಾಗಿ ಬಸ್‌ ನಿಂತಾಗ ನೌಷಾದ್‌ ಕೂಡ ಬಸ್‌ನಿಂದ ಇಳಿದು ತನ್ನ ಸೇಹಿತರಿಗೆ ವಿಷಯ ತಿಳಿಸಿ, ತನ್ನ ಮೊಬೈಲನ್ನು ವಿನಾಕಾರಣ ಬಜರಂಗ ದಳದ ಯುವಕರು ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ. ಪೈಚಾರ್‌ನಲ್ಲಿ ಜನ ಜಮಾಯಿಸಿದರು. ಬಸ್ಸನ್ನು ಬಜರಂಗ ದಳದ ಯುವಕರು ಹಿಂಬಾಲಿಸುತ್ತಿರುವ ಮಾಹಿತಿ ಮೊದಲೇ ಬಂದ ಹಿನ್ನೆಲೆಯಲ್ಲಿ ಸುಳ್ಯ ಎಸ್‌ಐ ಹರೀಶ್‌ ಎಂ.ಆರ್‌. ಅವರು ಪೈಚಾರ್‌ಗೆ ಧಾವಿಸಿದರು. ಆ ವೇಳೆಗೆ ಬಸ್‌ ನಿಂತು ಜನ ಸೇರಿದ್ದರು. ಬಸ್ಸನ್ನು ಠಾಣೆಗೆ ತರುವಂತೆ ಸೂಚಿಸಿದ ಎಸ್‌ಐ, ಬಜರಂಗ ದಳದ ಐವರು ಯುವಕರನ್ನು ಕರೆದುಕೊಂಡು ಠಾಣೆಗೆ ಬಂದರು. ಠಾಣೆಯಲ್ಲಿ ಆ ಇಬ್ಬರು ಯುವತಿಯರು ಮತ್ತು ನೌಷಾದ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು.

ಆ ವೇಳೆಗೆ ಪುತ್ತೂರಿನಿಂದ ಬಜರಂಗದಳದ ಮುಖಂಡರಾದ ಅಜಿತ್‌ ರೈ ಹೊಸಮನೆ, ನ್ಯಾಯವಾದಿ ಚಿನ್ಮಯ್‌ ಮತ್ತಿತರ ಯುವಕರು ಮತ್ತು ಸುಳ್ಯದ ಬಜರಂಗ ದಳದ ಯುವಕರು ಪೋಲಿಸ್‌ ಠಾಣೆಗೆ ಬಂದರು. ನೌಷಾದ್‌ನ ಮತ್ತು ಆ ಯುವತಿಯರ ಮೊಬೈಲ್‌ ಪರಿಶೀಲಿಸಿದಾಗ ಅವರ ನಂಬರ್‌ಗಳು ಎರಡೂ ಮೊಬೈಲ್‌ಗಳಲ್ಲಿ ಇರಲಿಲ್ಲ. ಎರಡೂ ಕಡೆಯವರು ತಮಗೆ ಪರಿಚಯವೇ ಇಲ್ಲದ ಬಗ್ಗೆ ಹೇಳಿಕೊಂಡರಲ್ಲದೆ ಬಸ್ಸಲ್ಲಿ ಕೂಡ ಪರಸ್ಪರ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರು. ಇದನ್ನು ಬಸ್‌ ಕಂಡಕ್ಟರ್‌ ಕೂಡ ಖಚಿತಪಡಿಸಿದರು.

ಜರಂಗ ದಳದ ನಾಯಕರು ಮತ್ತು ಪೊಲೀಸ್‌ ಅಧಿಕಾರಿಗಳ ಮಧ್ಯೆ ಸುಮಾರು 1 ಗಂಟೆ ಚಕಮಕಿ ನಡೆದು ಬಳಿಕ ಪ್ರಕರಣ ಸುಖಾಂತ್ಯಗೊಂಡಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *