DAKSHINA KANNADA
ಸುಳ್ಯ -ಓವರ್ ಟೆಕ್ ಸಂದರ್ಭ ಲಾರಿ ಅಡಿಗೆ ಬಿದ್ದು ಬೈಕ್ ಸವಾರ ಸಾವು

ಸುಳ್ಯ ಮಾರ್ಚ್ 28: ಕಾರೊಂದನ್ನು ಓವರ್ ಟೆಕ್ ಮಾಡುವ ಸಂದರ್ಭ ಬೈಕ್ ಲಾರಿ ಅಡಿಗೆ ಬಿದ್ದು ಬೈಕ್ ಸವಾರ ಸಾವನಪ್ಪಿದ ಘಟನೆ ಮಡಿಕೇರಿ ಸಮೀಪದ ಕಾಟಿಕೇರಿ ಸಮೀಪ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಬೈಕ್ ಸವಾರ ಕಕ್ಕಬೆ ನಿವಾಸಿ ಶರತ್ (28) ಎಂದು ಗುರುತಿಸಲಾಗಿದೆ. ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬೈಕ್ ಸಮೇತ ಯುವಕ ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಡಿಕೇರಿ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಎನ್ ಡಿ ಆರ್ ಎಫ್ ಕೊಡಗು ಸಂಪಾಜೆ ಭಾಗದ ಸದಸ್ಯ ನಾಗೇಶ್ ಈ ಸಂದರ್ಭದಲ್ಲಿ ರಸ್ತೆ ಸಂಚಾರ ಸಗಮಗೊಳಿಸಲು ಹಾಗೂ ಶವ ಸಾಗಿಸಲು ಸಹಕರಿಸಿದರು.
1 Comment