DAKSHINA KANNADA
ಸುಳ್ಯ – ಓಮ್ನಿ ಕಾರು ಆಟೋ ನಡುವೆ ಅಪಘಾತ – ಆಟೋ ಚಾಲಕ ಸಾವು

ಸುಳ್ಯ ನವೆಂಬರ್ 06: ಓಮ್ನಿ ಕಾರು ಮತ್ತು ಆಟೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ನವೆಂಬರ್ 5 ರಂದು ರಾತ್ರಿ ಸಂಭವಿಸಿದೆ.
ರಿಕ್ಷಾ ಚಾಲಕ ಜಾಲ್ಸೂರು ಗ್ರಾಮದ ಬಾಬು ಪಾಟಾಳಿ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಕರೆ ತರಲಾಗಿದ್ದರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜಾಲ್ಸೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಅಟೋರಿಕ್ಷಾ ಮತ್ತು ಎದುರಿನಿಂದ ಬರುತ್ತಿದ್ದ ಓಮ್ನಿ ಮಧ್ಯೆ ಅಪಘಾತ ಸಂಭವಿಸಿದೆ
