LATEST NEWS
ಹಣಕಾಸಿನ ಮುಗ್ಗಟ್ಟು – ಆತ್ಮಹತ್ಯೆಗೆ ಶರಣಾದ ದಂಪತಿಗಳು…!!
ಮಂಗಳೂರು ಜೂನ್ 09: ಹಣಕಾಸಿನ ಮುಗ್ಗಟ್ಟಿನಿಂದ ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕದ್ರಿ ಬಳಿಯ ಪಿಂಟೋ ಲೇನ್ ನಲ್ಲಿ ನಡೆದಿದೆ.
ಮೃತರನ್ನು 62 ವರ್ಷ ಸುರೇಶ್ ಮತ್ತು 57ರ ಹರೆಯದ ವಾಣಿ ಎಂದು ಗುರುತಿಸಲಾಗಿದೆ. ಮನೆಯ ಮೂರನೇ ಮಹಡಿಯ ಛಾವಣಿಗೆ ನೇಣು ಬಿಗಿದು ಪತ್ನಿ ವಾಣಿ ಆತ್ಮಹತ್ಯೆ ಮಾಡಿದರೆ, ಪತಿ ಸುರೇಶ್ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ.
ಇನ್ನು ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಪೊಲೀಸ್ ಮೂಲಗಳ ಪ್ರಕಾರ ಆತ್ಮಹತ್ಯೆ ಮಾಡಿದ ವಾಣಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಇದರಲ್ಲಿ ಅಪಾರ ನಷ್ಟ ಅನುಭವಿಸಿದ್ದರು. ದುಡ್ಡು ವಾಪಾಸ್ಸು ಬಾರದ ಹಿನ್ನೆಲೆಯಲ್ಲಿ ಚೀಟಿಗೆ ದುಡ್ಡು ಹಾಕಿದವರು ಹಣ ವಾಪಾಸ್ ಕೇಳುತ್ತಿದ್ದರು.
ಇದರಿಂದ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದ ದಂಪತಿ ಆತ್ಮಹತ್ಯೆಯೊಂದೇ ದಾರಿ ಎಂಬ ನಿರ್ಧಾರಕ್ಕೆ ಬಂದು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕದ್ರಿ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ.