Connect with us

DAKSHINA KANNADA

ಮನೆ ಅಂಗಳಕ್ಕೆ ಬಂದ ಮದುವೆ ದಿಬ್ಬಣ…ಯುವಕ ಸಹೋದರನ ಮನೆಯಲ್ಲಿ ನೇಣಿಗೆ ಶರಣು

ಪುತ್ತೂರು : ಪ್ರೀತಿಯನ್ನು ಬಚ್ಚಿಟ್ಟು..ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ ಯುವಕನೊಬ್ಬ ತನ್ನ ಸಹೋದರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ. ಮೃತ ಯುವಕನನ್ನು ಸುಳ್ಯಪದವು ಶಬರಿನಗರ ನಿವಾಸಿ ಕೂಸಪ್ಪ ಪೂಜಾರಿ ಅವರ ಪುತ್ರ ರವಿರಾಜ್‌ (31) ಎಂದು ಗುರುತಿಸಲಾಗಿದೆ.


ರವಿರಾಜ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಕುಂದಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರವನ್ನ ತನ್ನ ಮನೆಯವರಿಗೆ ತಿಳಿಸದೆ ಗುಟ್ಟಾಗಿ ಇಟ್ಟಿದ್ದ. ಆದರೆ ಈ ನಡುವೆ ರವಿರಾಜ್ ಮನೆಯವರು ವಿಟ್ಲದ ಯುವತಿಯೊಂದಿಗೆ ವಿವಾಹ ಸಂಬಂಧ ಮಾತುಕತೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ನಿಶ್ಚಿತಾರ್ಥಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಕುಂದಾಪುರ ಯುವತಿ ಕಡೆಯವರು ವಿವಾಹ ಕಾರ್ಯ ನಡೆಸಲು ಭಾನುವಾರ ತನ್ನ ಮನೆಗೆ ದಿಬ್ಬಣದೊಂದಿಗೆ ಬರಲು ತೀರ್ಮಾನಿಸಿರುವ ವಿಚಾರ ಅರಿತ ರವಿರಾಜ್ ನ.19ರಂದು ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿ ನ.21ರಂದು ಸಂಜೆ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು.

ರವಿರಾಜ್‌ ಅವರನ್ನು ವಿವಾಹವಾಗಲೆಂದು ನ.21ರಂದು ಕುಂದಾಪುರದಿಂದ ಬೇರೊಂದು ಹುಡುಗಿಯ ದಿಬ್ಬಣ ದಿಢೀರ್‌‌ ಬಂದಾಗ ಆತಂಕಕ್ಕೊಳಗಾದ ಮನೆಯವರು ರವಿರಾಜ್‌‌ ಅವರನ್ನು ಹುಡುಕಾಡಿದ್ದಾರೆ. ಆದರೆ, ಆ ವೇಳೆ ರವಿರಾಜ್‌‌ ಮನೆಯಲ್ಲಿರಲಿಲ್ಲ. ಇದರಿಂತ ಆತಂಕಗೊಂಡ ಮನೆಯವರು ಹುಡುಕಾಟ ಮುಂದುವರಿಸಿದ್ದಾರೆ.

ನೆಟ್ಟಣಿಗೆ ಮುಡ್ನೂರುಗ್ರಾಮದ ಈಶ್ವರಮಂಗಲ ಕರೆಂಟಿಯಡ್ಕದಲ್ಲಿ ವಿದೇಶದಲ್ಲಿರುವ ರವಿರಾಜ್‌‌‌‌ ಅವರ ಸಹೋದರನ ಇನ್ನೂ ಗೃಹಪ್ರವೇಶವಾಗದ ಹೊಸ ಮನೆಯ ಬಚ್ಚಲು ಕೋಣೆಯಲ್ಲಿ ರವಿರಾಜ್‌‌ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ಜಗನ್ನಾಚಾರ್ಯ ಅವರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ರವಿರಾಜ್‌ ಅವರ ತಂದೆ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *