LATEST NEWS
ನೇತ್ರಾವತಿ ನದಿ ತೀರದಲ್ಲಿ ಯುವಕನ ಶವ ಪತ್ತೆ…

ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಶಂಕೆ
ಮಂಗಳೂರು ಜೂನ್ 9: ನೇತ್ರಾವತಿ ನದಿ ತೀರದಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಉಳ್ಳಾಲ ಹೊಯ್ಗೆ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಈ ಶವ ಪತ್ತೆಯಾಗಿದ್ದು. ಮೃತ ಯುವಕನನ್ನು ಕೊಲ್ಯ ಸಾರಸ್ವತ ಕೊಲೊನಿ ನಿವಾಸಿ ಚೇತನ್ ಆಚಾರ್ಯ ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿವಸದ ಹಿಂದೆ ಚೇತನ್ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಚೇತನ್ ನಾಪತ್ತೆ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಮಾನಸಿಕ ಖಿನ್ನತೆಯಿಂದ ಚೇತನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
