LATEST NEWS
ಮಂಗಳೂರು – ಸುಹಾಸ್ ಶೆಟ್ಟಿ ಹತ್ಯೆ ಸಂದರ್ಭ ಕಾರಿನ ಬಳಿ ಇದ್ದ ಬುರ್ಖಾಧಾರಿ ಮಹಿಳೆಯರ ವಿಚಾರಣೆ

ಮಂಗಳೂರು ಮೇ 06: ಬಜಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಸಂದರ್ಭ ಆರೋಪಿಗಳು ಎಸ್ಕೇಪ್ ಆಗುವ ವೇಳೆ ಕಾರಿನ ಬಳಿ ಇದ್ದ ಇಬ್ಬರ ಬುರ್ಖಾಧಾರಿ ಮಹಿಳೆಯರ ವಿಚಾರಣೆಯನ್ನು ಪೊಲೀಸರು ನಡೆಸಿದ್ದು, ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿದ್ದ ಇಬ್ಬರು ಬುರ್ಖಾದಾರಿ ಮಹಿಳೆಯರಲ್ಲಿ ಕೊಲೆ ಪ್ರಕರಣದ ಎರಡನೇ ಆರೋಪಿ ನಿಯಾಜ್‌ನ ಚಿಕ್ಕಮ್ಮ ಮತ್ತು ಅವರ ಮಗಳು ಎಂದು ತಿಳಿದು ಬಂದಿದೆ. ಬಜಪೆಯ ಫ್ಲ್ಯಾಟ್‌ನಲ್ಲಿರುವ ಸಂಬಂಧಿಯೊಬ್ಬರ ಆರೋಗ್ಯ ವಿಚಾರಣೆಗೆ ಇವರು ಬಂದಿದ್ದರು. ಅಲ್ಲಿಂದ ಮನೆಗೆ ವಾಪಸು ಹೋಗುವಾಗ ಘಟನ ಸ್ಥಳದ ಪಕ್ಕದ ಹೊಟೇಲ್‌ನಿಂದ ಪಾರ್ಸೆಲ್ ತೆಗೆದುಕೊಂಡು ಹೊರ ಬಂದರು.

ಆಗ ನಿಯಾಜ್ ರಸ್ತೆಯಲ್ಲಿ ಓಡುವುದನ್ನು ಕಂಡರು. ಘಟನ ಸ್ಥಳದಲ್ಲಿ ಅಪಘಾತ ಸನ್ನಿವೇಶವಿದ್ದು, ನಿಯಾಜ್ ಓಡುತ್ತಿರುವುದು ನೋಡಿ ಆತನಿದ್ದಲ್ಲಿಗೆ ಹೋಗಿರುವುದಾಗಿ ವಿಚಾರಣೆ ವೇಳೆ ಮಹಿಳೆಯರು ವಿವರಿಸಿದ್ದಾರೆ ಎನ್ನಲಾಗಿದೆ.