LATEST NEWS
ಉಸಿರು ಇರುವವರೆಗೆ ಹಿಂದೂತ್ವಕ್ಕೆ ಹೋರಾಟ ಮಾಡ್ತಿನಿ ಅಂತಿದ್ದ..ಆದರೆ ಅವನ ಉಸಿರನ್ನೆ ನಿಲ್ಲಿಸಿ ಬಿಟ್ರು – ಸುಹಾಸ್ ತಾಯಿ

ಮಂಗಳೂರು ಮೇ 02: ಉಸಿರು ಇರುವವರೆಗೆ ಹಿಂದೂತ್ವಕ್ಕೆ ಹೋರಾಟ ಮಾಡ್ತಿನಿ ಅಂತಿದ್ದ..ಆದರೆ ಅವನ ಉಸಿರನ್ನೆ ನಿಲ್ಲಿಸಿ ಬಿಟ್ರು ಎಂದು ಹಿಂದೂ ಕಾರ್ಯಕರ್ತರ ಸುಹಾಸ್ ತಾಯಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸುಹಾಸ್ ತಾಯಿ ಸುಲೋಚನಾ ನಿನ್ನೆ ಬೆಳಗ್ಗೆ ಮದುವೆಯ ಬ್ಯುಸಿಯಲ್ಲಿ ಇದ್ದೆವು, ಹಾಗೆ ಅವನಿಗೆ ಫೋನ್ ಮಾಡಲು ಆಗಲಿಲ್ಲ, ರಾತ್ರಿ ಕಾಲ್ ಮಾಡಿದಾಗ ಕಾಲ್ ಸಿಗುತ್ತಾ ಇರಲಿಲ್ಲ ಎಂದರು.
ನನ್ನ ಮಗ ಉಸಿರು ಇರುವವರೆಗೆ ಹಿಂದೂತ್ವಕ್ಕೆ ಹೋರಾಟ ಮಾಡ್ತಿನಿ ಅಂತಿದ್ದ..ಆದರೆ ಅವನ ಉಸಿರನ್ನೆ ನಿಲ್ಲಿಸಿ ಬಿಟ್ರು, ಮಗನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಅವರು , ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾವು 85 ಶೇಕಡಾ ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ, ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಹಾಸ್ ಶೆಟ್ಟಿ ತಾಯಿ ಪ್ರತಿಕ್ರಿಯಿಸಿದ್ದಾರೆ.
