Connect with us

    DAKSHINA KANNADA

    ಸುಬ್ರಹ್ಮಣ್ಯ: ಚಲಿಸುತ್ತಿದ್ದ KSRTC ಬಸ್ ಮೇಲೆ ಬಿದ್ದ ಮರ- ಪ್ರಯಾಣಿಕರು ಅಪಾಯದಿಂದ ಪಾರು

    ಸುಬ್ರಹ್ಮಣ್ಯ, ಜೂನ್ 13: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಮೇಲೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಘಟನೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದಿದೆ. ಇದೇ ಸಂದರ್ಭ ಮತ್ತೊಂದೆಡೆ ಟೆಂಪೋ ಟ್ರಾವೆಲರ್ ಮೇಲೆ ಮರ ಬಿದ್ದು, ವಾಹನ ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಅಲ್ಲೇ ಸಮೀಪ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಎಂಬಲ್ಲಿ ನಿನ್ನೆ ನಡೆದಿದೆ.

    ಸುಬ್ರಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮತ್ತೊಂದು ಕಡೆ ಸುಬ್ರಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಮೇಲೆ ಪೆರಿಯಶಾಂತಿ ಸಮೀಪ ರಸ್ತೆಯ ಪಕ್ಕದಲ್ಲಿದ್ದ ಮರವೊಂದು ಉರುಳಿ ಬಿದ್ದಿದೆ.

    ಈ ಘಟನೆಯಲ್ಲಿ ಟ್ರಾವೆಲರ್ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಮಳೆಗೆ ರಸ್ತೆ ಬದಿಯಲ್ಲಿನ ಅಪಾಯಕಾರಿಯಾಗಿರುವ ಮರಗಳು ಉರುಳಿವೆ ಎಂದು ಹೇಳಲಾಗುತ್ತಿದೆ. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳಿಂದ ಇಷ್ಟೆಲ್ಲಾ ದುಷ್ಪರಿಣಾಮ ಸಂಭವಿಸುತ್ತಿದ್ದರೂ ಕೂಡಾ ಅರಣ್ಯ ಇಲಾಖೆ ಮಾತ್ರ ಇದರ ಬಗ್ಗೆ ಗಮನವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಈ ಭಾಗದ ಹೆದ್ದಾರಿಗಳಲ್ಲಿ ಆಗಾಗ ರಸ್ತೆ ಬದಿಯ ಮರಗಳು ಬಿದ್ದು ಪ್ರಾಣಹಾನಿ ಸಹಿತ ಅಪಾಯಗಳು ಆಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *