DAKSHINA KANNADA
ಸುಬ್ರಹ್ಮಣ್ಯ -ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು….!!

ಪುತ್ತೂರು ನವೆಂಬರ್ 16 :ಹೊಳೆಯಲ್ಲಿ ಮುಳುಗಿ ಇಬ್ಬರು ಸಾವನಪ್ಪಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ಯೇನೆಕಲ್ಲಿನಲ್ಲಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೃತರನ್ನು ಧರ್ಮಪಾಲ ಪರಮಲೆ (46 ವ.) ಮತ್ತು ಬೆಳ್ಯಪ್ಪ ಚಳ್ಳಂಗಾರು, ಚೊಕ್ಕಾಡಿ (49ವ.) ಮೃತರು ಎಂದು ಗುರುತಿಸಲಾಗಿದೆ. ಯೇನೆಕಲ್ಲು ಮುಖ್ಯ ರಸ್ತೆಯ ಸೇತುವೆಯ ಕೆಳಭಾಗದಲ್ಲಿ ಘಟನೆ ಸಂಭವಿಸಿದೆ.

Man drowning in the water
ಧರ್ಮಪಾಲ ಅವರು ಕೆಲವು ಸಮಯಗಳಿಂದ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಕಸವಿಲೇವಾರಿ ಘಟಕದಲ್ಲಿ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಳೆಯಲ್ಲಿದ್ದ ಪಂಪಿನ ಫೂಟ್ ವಾಲ್ ತೆಗೆಯಲು ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿರಬಹುದೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ.
