DAKSHINA KANNADA
ಕೇರಳ ಸಂಘಪರಿವಾರದ ಮುಖಂಡನ ಮೇಲೆ ಸುಬ್ರಹ್ಮಣ್ಯ ಎಸೈ ಜಂಬೂರಾಜ್ ಅನಾಗರಿಕ ವರ್ತನೆ: ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಒತ್ತಾಯ

ಪುತ್ತೂರು, ಜುಲೈ 27: ಸಂಘ ಪರಿವಾರದ ಹಿರಿಯ ಸ್ವಯಂಸೇವಕ ಪಿ. ರಮೇಶ್ ರವರ ಮೇಲೆ ಪೋಲಿಸರ ಅನಾಗರಿಕ ವರ್ತನೆಗೆ ಹಿಂದು ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಯ ಜಿಲ್ಲಾ ಯುವ ನಾಯಕ ಶ್ರೀ ಪ್ರವೀಣ್ ನೆಟ್ಟಾರ್ ಹತ್ಯೆಯ ವಿಷಯ ತಿಳಿದು ಅಂತಿಮ ನಮನ ಸಲ್ಲಿಸಲು ದೂರದ ಕಾಸರಗೋಡಿನಿಂದ ಸಂಘ ಪರಿವಾರದ ಹಿರಿಯ ಸ್ವಯಂಸೇವಕ ಪಿ. ರಮೇಶ್ ರವರು (ಹುಬ್ಬಳ್ಳಿ ಈಗ್ದಾ ಮೈದಾನದಲ್ಲಿ ತಿರಂಗಾ ಹಾರಿಸಿದ ತಂಡದಲ್ಲಿದ್ದ ವೀರ) ಬಂದು ಅಂತಿಮ ನಮನ ಸಲ್ಲಿಸಿ ಬೆಳ್ಳಾರೆ ಪೇಟೆಯಲ್ಲಿ ನಿಂತಿದ್ದ ಸಂದರ್ಭ, ಯಾವುದೇ ಕಾರಣ ವಿಲ್ಲದೆ ಅಂತಿಮ ನಮನ ಸಲ್ಲಿಸಲು ಬಂದ ಹಿಂದು ಕಾರ್ಯಕರ್ತರ ವಿರುದ್ಧ ಲಾಠಿ ಚಾರ್ಜ್ ಮಾಡುತಿದ್ದ ಪೊಲೀಸರ ಕ್ರಮವನ್ನು ಪ್ರಶ್ನೆ ಮಾಡಿದ್ದಕ್ಕೆ ಹುಬ್ಬಳ್ಳಿ ರಮೇಶ್ ರವರನ್ನು ಅವರೊಬ್ಬ ಹಿರಿಯರು ಎಂದು ನೋಡದೆ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಕೃತ್ಯವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ ಸುಳ್ಯ CI ನವೀನ್ ಚಂದ್ರ ಜೋಗಿ, ಸುಬ್ರಮಣ್ಯ ಪೊಲೀಸ್ ಠಾಣೆ SI ಜಂಬುರಾಜ್, ಪುತ್ತೂರು ನಗರ ಪೊಲೀಸ್ ಠಾಣೆ SI ರಾಜೇಶ್, ಬೆಳ್ಳಾರೆ ಪೋಲಿಸ್ ಬಾಲಕೃಷ್ಣ,ಆನಂದ ಮತ್ತು ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ.
ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಉಗ್ರ ಪ್ರತಿಭಟನೆ ಮಾಡಬೇಕಾದೀತು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ. ಇದೇ ಪೋಲೀಸರು ಉಪ್ಪಿನಂಗಡಿಯಲ್ಲಿ ನಡೆದ ಪಿಎಫ್ಐ ಪ್ರತಿಭಟನೆಯ ವೇಳೆ ಗಲಭೆಕೋರರನ್ನು ಜೊತೆ ತೋರಿಸಿದ ಸಭ್ಯತೆ ಹಾಗು ಹಿಂದೂ ಸಂಘಟನೆಗಳ ಮೇಲೆ ತೋರಿಸಿದ ದರ್ಪ ಪೋಲೀಸ್ ಅಧಿಕಾರಿಯ ಇಬ್ಬಗೆ ನೀತಿಯನ್ನು ತೋರಿಸುತ್ತಿದೆ ಎಂದು ಹಿಂಜಾವೇ ಆರೋಪಿಸಿದೆ.