LATEST NEWS
ಅಲೋಶಿಯಸ್ ಕಾಲೇಜಿನ ಪಾರ್ಕ್ ಗೆ ಸ್ಟಾನ್ ಸ್ವಾಮಿ ಹೆಸರು – ಹಿಂದೂ ಸಂಘಟನೆಗಳಿಂದ ವಿರೋಧ
ಮಂಗಳೂರು ಅಕ್ಟೋಬರ್ 06: ಮಂಗಳೂರಿನ ಅಲೋಶಿಯಸ್ ಕಾಲೇಜಿನ ಕ್ಯಾಂಪಸ್ ಒಂದಕ್ಕೆ ಎಡಪಂಥೀಯ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ಹೆಸರನ್ನು ಇಡುವುದಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಎಬಿವಿಪಿ ವಿರೋಧ ವ್ಯಕ್ತಪಡಿಸಿದೆ.
ಕಾಲೇಜಿನಲ್ಲಿ ಪಾರ್ಕ್ ಒಂದಕ್ಕೆ ಹೆಸರಿಡಲು ಕಾಲೇಜು ಆಡಳಿತ ಮುಂದಾಗಿದೆ. ನಾಳೆ ಹತ್ತು ಗಂಟೆಗೆ ಪಾರ್ಕ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನಲೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸ್ಟಾನ್ ಸ್ವಾಮಿ ಹೆಸರನ್ನು ಕಾಲೇಜಿನ ಪಾರ್ಕ್ ಗೆ ಇಡಲು ಬಿಡು ವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಹೆಸರು ಇಡುವುದಾದರೆ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಅಥವಾ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಇಡಬಹುದು, ಆದರೆ, ನಕ್ಸಲರ ಜೊತೆ ನಂಟು ಹೊಂದಿದ್ದ ಸ್ಟಾನ್ ಸ್ವಾಮಿ ಅವರ ಹೆಸರನ್ನು ಇಡಲು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಲೇಜು ಆಡಳಿತ ದೇಶದ್ರೋಹಿ ವ್ಯಕ್ತಿಯ ಹೆಸರಿಡು ವುದನ್ನು ತಕ್ಷಣವೇ ಕೈ ಬಿಡಬೇಕು. ಇಲ್ಲದೇ ಇದ್ದಲ್ಲಿ ನಾಳೆಯೇ ನಾವು ಕಾಲೇಜು ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ.