LATEST NEWS
ಕಾಪು – ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದ ವಿದ್ಯಾರ್ಥಿನಿಯರು

ಕಾಪು : ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದ ಘಟನೆ ಕಾಪು ತಾಲೂಕಿನ ಫಕೀರನ ಕಟ್ಟೆ ಮಲ್ಲಾರ್ ಗ್ರಾಮದ ಪ್ರೌಢಶಾಲೆಯಲ್ಲಿ ನಡೆದಿದೆ.
ಸುಮಾರು 165 ವರ್ಷ ಇತಿಹಾಸವಿರುವ ಶಾಲೆಯಾಗಿದ್ದು, ಸುಮಾರು 22 ಮಂದಿಯಲ್ಲಿ 8 ಮಂದಿ ಮುಸ್ಲಿಂ ಮಕ್ಕಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಪಟ್ಟು ಹಿಡಿದ್ದಾರೆ. ಈ ಪ್ರೌಢಶಾಲೆಯಲ್ಲಿ ಶೇಕಡ 99 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಯೂನಿಫಾರ್ಮ್ ನ ದುಪ್ಪಟ್ಟವನ್ನು ತಲೆ ಮೇಲೆ ಹಾಕಿಕೊಂಡ ಬಂದ ವಿದ್ಯಾರ್ಥಿನಿಯರಿಗೆ , ಮುಖ್ಯೋಪಾಧ್ಯಯರು ಶಿಕ್ಷಕರು ಸರಕಾರದ ಆದೇಶವನ್ನು ಪೋಷಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ವಿವರಿಸಿದ್ದಾರೆ. ಹಿಜಾಬ್ ತೆಗೆಯಲು ಒಪ್ಪದ ಎಂಟು ಮಂದಿಗೆ ಪರೀಕ್ಷೆ ತರಗತಿ ಗೆ ಮೊದಲು ನಿರಾಕರಿಸಿ, ನಂತರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ.

ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಯೋಜನೆ ಮಾಡಲಾಗಿದೆ.ಈ ಸಂಘರ್ಷ ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು ಮಕ್ಕಳಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ನಿರಾಕರಿಸಿದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು.