LATEST NEWS
ವಿದ್ಯಾರ್ಥಿಗಳೇ ಹೋಮ್ ವರ್ಕ್ ಅನ್ನು ಮಾಡಬೇಕಿಲ್ಲ, ನಿಮ್ಮ ಮನೆಕೆಲಸ ಮಾಡಲು ಬಂದಿದೆ ಅತ್ಯದ್ಭುತ ಸಾಧನ..!
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ಮಾಡೋದು ಅಂದ್ರೆ ಎಲ್ಲಿಲ್ಲದ ಉದಾಸೀನ. ಆದರೆ ಇನ್ನು ಹೋಮ್ ವರ್ಕ್ ಅನ್ನು ನೀವು ಮಾಡಬೇಕಿಲ್ಲ, ಅದಕ್ಕೆಂದೇ ಒಂದು ಸಾಧನ ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲು ಕೇರಳದ ತ್ರಿಶೂರ್ ಜಿಲ್ಲೆಯ ಚಿರುದುರ್ತಿಯ ಯುವಕನೋರ್ವ ಸಿದ್ಧಪಡಿಸಿದ್ದಾನೆ.
ತ್ರಿಶೂರು : ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ಮಾಡೋದು ಅಂದ್ರೆ ಎಲ್ಲಿಲ್ಲದ ಉದಾಸೀನ. ಆದರೆ ಇನ್ನು ಹೋಮ್ ವರ್ಕ್ ಅನ್ನು ನೀವು ಮಾಡಬೇಕಿಲ್ಲ, ಅದಕ್ಕೆಂದೇ ಒಂದು ಸಾಧನ ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲು ಕೇರಳದ ತ್ರಿಶೂರ್ ಜಿಲ್ಲೆಯ ಚಿರುದುರ್ತಿಯ ಯುವಕನೋರ್ವ ಸಿದ್ಧಪಡಿಸಿದ್ದಾನೆ.
ಚಿರುದುರ್ತಿ ನಿವಾಸಿ ದೇವದತ್ತ್ ಈ ಸಾಧನ ತಯಾರಿಸಿದ ವಿದ್ಯಾರ್ಥಿಯಾಗಿದ್ದು, ತ್ರಿಶೂರ್ ನ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಏರೋನ್ಯಾಟಿಕ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿರುವ ದೇವದತ್ತ್ ಗೆ ಹೋಮ್ ವರ್ಕ್ ಮಾಡೋದಂದ್ರೆ ತುಂಬಾ ಕಷ್ಟವಾಗಿತ್ತು.
ಅದಕ್ಕಾಗಿ ಹೋಮ್ ವರ್ಕ್ ಮಾಡಲೆಂದೇ ತ್ರೀಡಿ ಬೋರ್ಡ್ ಬಳಸಿ ಕೈಯಲ್ಲೇ ಬರೆಯುವಂತಹ ಯಂತ್ರವನ್ನು ಈತ ರೆಡಿ ಮಾಡಿದ್ದಾನೆ.
ಆದರೆ ಹೋಮ್ ವರ್ಕ್ ಬರೆದು ಕಾಲೇಜಿನ ಪ್ರಾದ್ಯಾಪಕರಲ್ಲಿ ತೋರಿಸಿದಾಗ ಇದು ನಿನ್ನ ಹ್ಯಾಂಡ್ ರೈಟ್ ತರ ಇಲ್ಲ, ಯಾರು ಬರೆದಿದ್ದು ಎಂದು ಪ್ರಶ್ನಿಸಿದ್ದಾರೆ.
ಮೊದಲ ಪ್ರಯತ್ನದಲ್ಲೇ ಸಿಕ್ಕಿ ಬಿದ್ದ ದೇವದತ್ತ್ ತನ್ನದೇ ಹ್ಯಾಂಡ್ ರೈಟ್ ಅನ್ನ ಯಂತ್ರಕ್ಕೆ ಸಾಫ್ಟ್‌ವೇರ್ ಮೂಲಕ ಅಳವಡಿಸಿ ಬಳಿಕ ನಿರಾತಂಕವಾಗಿ ಹೋಮ್ ವರ್ಕ್ ಅನ್ನ ಈ ಹ್ಯಾಂಡ್ ರೈಟಿಂಗ್ ಮಿಷಿನ್ ಮೂಲಕವೇ ಬರೆಸಿಕೊಳ್ಳುತ್ತಿದ್ದಾನೆ.
ಯಾರು ಬೇಕಾದರೂ ತಮ್ಮ ತಮ್ಮ ಶೈಲಿಯ ಹ್ಯಾಂಡ್ ರೈಟಿಂಗ್ ಅನ್ನ ಈ ಮಿಷಿನ್ ಗೆ ಸೆಟ್ ಮಾಡಿ ಹೋಮ್ ವರ್ಕ್ ಬರೆಯಬಹುದಂತಹ ಎರಡನೇ ಆವೃತ್ತಿಯ ಯಂತ್ರವನ್ನು ದೃವದತ್ತ್ ಸಿದ್ಧಪಡಿಸುತ್ತಿದ್ದು, ಈ ಯಾಂತ್ರಕ್ಕೆ ಇದೀಗ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳಿಂದ ಬೇಡಿಕೆ ಬರುತ್ತಿದೆ. ಮೆಡಿಕಲ್, ನರ್ಸಿಂಗ್ ಮತ್ತು ಇನ್ನಿತರ ಕೆಲವು ಕಛೇರಿಗಳಲ್ಲಿ ಕೆಲವು ಕೆಲಸಗಳನ್ನು ಕೈ ಬರಹದ ಮೂಲಕ ಬರೆಯಬೇಕಾದ ಕಾರಣ ದೇವದತ್ತ್ ನ ಈ ಹ್ಯಾಂಡ್ ರೈಟಿಂಗ್ ಮಿಷಿನ್ ಗೆ ಹೆಚ್ಚಿನ ಬೇಡಿಕೆ ಈಗಾಗಲೇ ಬರಲು ಆರಂಭಿಸಿದೆ.
ದೇವದತ್ತ್ ನ ಈ ಪ್ರಯೋಗಗಳಿಗೆ ಅವರ ಪೋಷಕರ ಎಲ್ಲಾ ರೀತಿಯಲ್ಲೂ ಸಾಥ್ ನೀಡುತ್ತಿದ್ದಾರೆ.