DAKSHINA KANNADA
ಪುತ್ತೂರು – ನಿಗೂಢ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿನಿ
ಪುತ್ತೂರು ಜನವರಿ 10: ವಿಧ್ಯಾರ್ಥಿನಿಯೊಬ್ಬಳು ನಿಗೂಢ ಕಾರಣಕ್ಕೆ ಆತ್ಮಹತ್ಯೆಗ ಶರಣಾದ ಘಟನೆ ನರಿಮೊಗರು ಎಂಬಲ್ಲಿ ನಡೆದಿದೆ.
ನರಿಮೊಗರು ಕೂಡುರಸ್ತೆಯ ಕೇಶವ ಎಂಬವರ ಪುತ್ರಿ ಸಂತ ಪಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ(17) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ದೀಕ್ಷಿತಾ ಅವರು ಕಾಲೇಜಿನಿಂದ ಮನೆಗೆ ಬಂದ ಬಳಿಕ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಕೇಶವ, ತಾಯಿ ಪುಷ್ಪಾ, ಸಹೋದರ ದೀಕ್ಷಿತ್ ಅವರನ್ನು ಅಗಲಿದ್ದಾರೆ.