LATEST NEWS
ವಾಟ್ಸಾಫ್ ಮತ್ತು ಫೇಸ್ಬುಕ್ ಬಳಸಲ್ಲ ಎಂದು ಪ್ರಮಾಣ ಮಾಡಿದ ವಿಧ್ಯಾರ್ಥಿಗಳು
ವಾಟ್ಸಾಫ್ ಮತ್ತು ಫೇಸ್ಬುಕ್ ಬಳಸಲ್ಲ ಎಂದು ಪ್ರಮಾಣ ಮಾಡಿದ ವಿಧ್ಯಾರ್ಥಿಗಳು
ಮಂಗಳೂರು ಜುಲೈ 7: ಕೆಲಸ ಸಿಗುವರೆಗೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸಾಫ್ ಬಳಸುವುದಿಲ್ಲ ಎಂದು ವಿದ್ಯಾರ್ಥಿಗಳು ತಂದೆ -ತಾಯಿಯ ಮೇಲೆ ಪ್ರಮಾಣ ಮಾಡಿರುವ ವಿಶೇಷ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರಮಾಣ ಮಾಡಿದ್ದು, ಜೀವನದ ಗುರಿ ತಲುಪುವರೆಗೆ ಸಾಮಾಜಿಕ ಜಾಲತಾಣವಾದ ವಾಟ್ಸಾಪ್, ಫೇಸ್ಬುಕ್ ಬಳಸಲ್ಲ ಅಂತಾ ಪ್ರತಿಜ್ಞೆ ಕೈಗೊಂಡಿದ್ದಾರೆ. ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಫ್ರೆಂಡ್ಸ್ ಶಿಪ್ ಗಿಟ್ಟಿಸಿಕೊಂಡು ದುರುಪಯೋಗ ಮಾಡುತ್ತಾರೆ.
ಇತ್ತೀಚೆಗೆ ಗಡಿಭಾಗದ ಕೇರಳದಲ್ಲಿ ಲವ್ ಜಿಹಾದ್ ಮೂಲಕ ಭಯೋತ್ಪಾದನೆಗೆ ಹಲವಾರು ಘಟನೆಗಳಿಗೆ ಸಾಮಾಜಿಕ ಜಾಲತಾಣಗಳೇ ಕಾರಣ. ನಮ್ಮನ್ನು ಹೆತ್ತುಹೊತ್ತ ತಂದೆ ತಾಯಿಗಳಿಗೆ ನಾವು ಸಿಗಬೇಕು. ನಮ್ಮ ಸಮಯವನ್ನು, ಜೀವನವನ್ನು ತಿನ್ನುವ ಸಾಮಾಜಿಕ ಜಾಲತಾಣಗಳಿಂದ ಹೊರಬರಬೇಕೆಂದು ನಾವು ಸ್ವ- ತೀರ್ಮಾನ ತೆಗೊಂಡು ಈ ನಿರ್ಧಾರಕ್ಕೆ ಬಂದಿದ್ದೆವೆ ಎನ್ನುತ್ತಾರೆ ವಿದ್ಯಾರ್ಥಿನಿಯರು.