LATEST NEWS
ಯೂಟ್ಯೂಬ್ ನಲ್ಲಿ ಬೈಕ್ ಕಳ್ಳತನ ಕಲಿತ ವಿಧ್ಯಾರ್ಥಿಗಳು ಮಾಡಿದ್ದೇನು ?
ಯೂಟ್ಯೂಬ್ ನಲ್ಲಿ ಬೈಕ್ ಕಳ್ಳತನ ಕಲಿತ ವಿಧ್ಯಾರ್ಥಿಗಳು ಮಾಡಿದ್ದೇನು ?
ಮಂಗಳೂರು ಮೇ 28:ಯೂಟ್ಯೂಬ್ ನಲ್ಲಿ ಬೈಕ್ ಹೇಗೆ ಕದಿಯಬಹುದೆಂದು ಕಲಿತು ಬೈಕ್ ಕಳ್ಳತನಕ್ಕೆ ಇಳಿದ 8 ಮಂದಿ ವಿಧ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 25ಕ್ಕೂ ಅಧಿಕ ಬೈಕ್ ಕಳ್ಳತನವಾಗಿತ್ತು, ನಗರದಲ್ಲಿ ಬೈಕ್ ಕಳ್ಳತನ ಹೆಚ್ಚಾಗುತ್ತಿದ್ದಂತೆ ನಗರದ ಬಂದರು ಠಾಣೆಯ ಪೊಲೀಸರು ಈ ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕೊನೆಗೂ ಬೈಕ್ ಕಳ್ಳರ ಗ್ಯಾಂಗ್ ನ್ನು ಹಿಡಿಯಲು ಸಫಲರಾದರು. ಕೇರಳದ ಅಪ್ರಾಪ್ತ ಯುವಕರ ಒಳಗೊಂಡ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ವಿಚಾರಣೆ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳು ಹಿಂದೆ ಪ್ರವಾಸಕ್ಕೆ ತೆರಳುವಾಗಿ ಬಾಡಿಗೆ ಕಾರು ಅಪಘಾತವಾದ ಹಿನ್ನಲೆಯಲ್ಲಿ ಅದರ ನಷ್ಟವನ್ನು ತುಂಬಿಕೊಡಲು ಕಳ್ಳತನಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ. ಯೂಟ್ಯುಬ್ ನಲ್ಲಿ ಲಾಕ್ ಮಾಡಿದ ಬೈಕನ್ನು ಅನ್ ಲಾಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ಸಂಗ್ರಹಿಸಿ ಉಪಾಯದಿಂದ ಹೊಸ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಬೈಕ್ ಗಳನ್ನು ಈ ವಿದ್ಯಾರ್ಥಿಗಳು ಕೇರಳದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿಗಳು ಕದ್ದ ಬೈಕ್ ನ್ನು ತೆಗೆದುಕೊಂಡು ಹೋಗುತ್ತಿರುವ ಸಂದರ್ಭ ತಪಾಸಣೆಗೆ ಪೊಲೀಸರು ನಿಲ್ಲಿಸಿದರೆ ಅಲ್ಲೇ ಬೈಕನ್ನು ಬಿಟ್ಟು ಹೋಗುತ್ತಿದ್ದರು, ಬೈಕ್ ದಾಖಲೆ ಮನೆಯಲ್ಲಿದೆ ಎಂದು ಹೇಳಿ ಹೋಗುತ್ತಿದ್ದ ವಿಧ್ಯಾರ್ಥಿಗಳು ಮತ್ತೆ ಹಿಂದಿರುಗಿ ಬರುತ್ತಿರಲಿಲ್ಲ. ಈ ರೀತಿಯ ಎರಡು ಬೈಕ್ ಗಳು ಪತ್ತೆಯಾಗಿವೆ.
ಮಂಗಳೂರಿನ ಕಾಲ್ ಸೆಂಟರ್ ಕೆಳಗೆ, ಮನೆಗಳ ಹೊರಗೆ , ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದರುವ ಬೈಕ್ ಗುರುತಿಸಿ ಈ ತಂಡ ಕಳ್ಳತನ ಮಾಡಿ ಬೈಕ್ ಗಳನ್ನು ಚಲಾಯಿಸಿಕೊಂಡು ತೆರಳುತ್ತಿದ್ದ ಈ ಚೋರರು ಮುಂಜಾನೆ ಪಯ್ಯನ್ನೂರು ತಲಪುತ್ತಿದ್ದರು. ಈ ತಂಡ ಹೆಚ್ಚಾಗಿ ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿತ್ತು. ಹೆಚ್ಚಾಗಿ ಹೊಸ ಬೈಕ್ ಗಳನ್ನೆ ಕಳವು ಮಾಡುತ್ತಿದ್ದ ಈ ತಂಡ ಕಳೆದ 3 ತಿಂಗಳಲ್ಲಿ 25 ಕ್ಕೂ ಹೆಚ್ಚು ಬೈಕ್ ಗಳನ್ನು ಕಳ್ಳತನ ಮಾಡಿದೆ ಎಂದು ಹೇಳಲಾಗಿದೆ. ಬಂಧಿತರಿಂದ ಒಂದು ಕಾರು ಮತ್ತು 3 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.