LATEST NEWS
ಕಾರ್ಕಳ – ಅರ್ಭಿ ಫಾಲ್ಸ್ ನಲ್ಲಿ ಮುಳುಗಿ ವಿಧ್ಯಾರ್ಥಿನಿ ಸಾವು

ಕಾರ್ಕಳ ಅಗಸ್ಟ್ 02: ಅರ್ಭಿ ಫಾಲ್ಸ್ ನಲ್ಲಿ ಈಜಲು ತೆರಳಿದ್ದ ವಿಧ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ.
ಮೃತ ವಿಧ್ಯಾರ್ಥಿನಿಯನ್ನು ಮಂಗಳೂರಿನ ನಿವಾಸಿ ವರ್ಷಿತಾ ಎಂದು ಗುರುತಿಸಲಾಗಿದ್ದು, ಈಕ ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಧ್ಯಾರ್ಥಿನಿ ಎಂದು ಹೇಳಲಾಗಿದೆ.

ಈಕೆ ತನ್ನ ಇಬ್ಬರು ಸಹಪಾಟಿಗಳೊಂದಿಗೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ಗೆ ತೆರಳಿದ್ದಾಳೆ. ಈಜಲೆಂದು ನೀರಿಗೆ ಇಳಿದಿದ್ದಳು. ಈ ವೇಳೆ ಮುಳುಗಿದ್ದಾಳೆ ಎನ್ನಲಾಗಿದೆ, ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ