DAKSHINA KANNADA
ಕಡಬ- ಆ್ಯಸಿಡ್ ಹಾಕಿ ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಹಿಡಿದ ವಿಧ್ಯಾರ್ಥಿಗಳು – ಸಿಸಿಟಿವಿ ವಿಡಿಯೋ

ಪುತ್ತೂರು ಮಾರ್ಚ್ 07: ಕಡಬದ ಸರಕಾರಿ ಕಾಲೇಜಿನ ಆವರಣದಲ್ಲಿದ್ದ ಮೂವರು ವಿಧ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗುತ್ತಿದ್ದ ಆರೋಪಿ ಅಭಿನ್ ನ್ನು ಶಾಲಾ ವಿಧ್ಯಾರ್ಥಿಗಳು ಅಟ್ಟಿಸಿಕೊಂಡು ಹೋಗಿ ಹಿಡಿದಿರುವ ಸಿಸಿಟಿವಿ ವಿಡಿಯೋ ಇದೀಗ ಲಭ್ಯವಾಗಿದೆ.
ಆ್ಯಸಿಡ್ ದಾಳಿ ಆರೋಪಿ ಅಭಿನ್ ಕಡಬದ ಬೇಕರಿಯೊಂದರಲ್ಲಿ ಫೋನ್ ಚಾರ್ಜ್‌ಗಿಟ್ಟು, ಅಲ್ಲೇ ಒಂದು ಬ್ಯಾಗ್ ಇಟ್ಟಿದ್ದ . ಬಳಿಕ ಬ್ಯಾಗ್ನಿಂದ ಯಾವುದೋ ವಸ್ತುವನ್ನು ಪ್ಯಾಂಟ್ ಪಾಕೇಟಿಗೆ ಹಾಕಿ ಅಲ್ಲಿಂದ ಹೊರನಡೆದಿದ್ದ . ನಂತರದಲ್ಲಿ ಆತ ಈ ಕಪ್ಪು ಬಣ್ಣದ ಬಟ್ಟೆಯನ್ನು ತಹಶಿಲ್ದಾರ್ ಕಚೇರಿ ಸಮೀಪದಲ್ಲಿ ಬಿಚ್ಚಿ ಅಲ್ಲಿಂದ ಯೂನಿಫಾರ್ಮ್ ಬಟ್ಟೆ ಧರಿಸಿ, ಶಾಲಾ ಆವರಣ ಪ್ರವೇಶಿಸಿ, ಆ್ಯಸಿಡ್ ದಾಳಿ ನಡೆಸಿದ್ದ. ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ, ಈ ವೇಳೆ ಅಲ್ಲೆ ಇದ್ದ ವಿಧ್ಯಾರ್ಥಿಗಳು ಆತನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದಾರೆ.
