DAKSHINA KANNADA
ಪುತ್ತೂರಿನಲ್ಲಿ ಬೀದಿಗೆ ಬಂದ ಕಾಂಗ್ರೇಸ್ ಮುಖಂಡರ ಜಗಳ, ಪರಸ್ಪರ ಹೊರಳಾಡಿಕೊಂಡ ನಾಯಕರು
ಪುತ್ತೂರಿನಲ್ಲಿ ಬೀದಿಗೆ ಬಂದ ಕಾಂಗ್ರೇಸ್ ಮುಖಂಡರ ಜಗಳ, ಪರಸ್ಪರ ಹೊರಳಾಡಿಕೊಂಡ ನಾಯಕರು
ಪುತ್ತೂರು, ಮೇ 25: ಕಾಂಗ್ರೇಸ್ ಮುಖಂಡರಿಬ್ಬರು ಪರಸ್ಪರ ಹೊಡೆದಾಡಿ, ಹೊರಳಾಡಿದ ಘಟನೆ ಪುತ್ತೂರಿನ ಕಾಂಗ್ರೇಸ್ ಕಛೇರಿಯಲ್ಲಿ ಮೇ 21 ರಂದು ನಡೆದಿದೆ.
ರಾಜೀವ್ ಗಾಂಧಿ ಪುಣ್ಯದಿನಾಚರಣೆಗಾಗಿ ಕಾಂಗ್ರೇಸ್ ಕಛೇರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಹಿರಿಯ ಕಾಂಗ್ರೇಸ್ ಮುಖಂಡ ಬೋಳೋಡಿ ಚಂದ್ರಹಾಸ್ ರೈ ಹಾಗೂ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕರಾದ ಇಸಾಕ್ ಸಾಲ್ಮರ ಪರಸ್ಪರ ಹೊಡೆದಾಡಿ ಹೊರಳಾಡಿಕೊಂಡಿದ್ದಾರೆ.
ಪಕ್ಷದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಎರಡು ನಾಯಕರ ಜೊತೆ ಪರಸ್ಪರ ವಾಗ್ವಾದ ನಡೆದಿದೆ.
ವಾಗ್ವಾದ ತಾರಕಕ್ಕೇರಿ ಇಬ್ಬರು ನಾಯಕರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ನಾಯಕರ ಈ ಹೊಡೆದಾಟ ಕಾಂಗ್ರೇಸ್ ಕಛೇರಿಯಿಂದ ಬೀದಿಯವರೆಗೂ ಬಂದಿತ್ತು.
ಕಛೇರಿಯೊಳಗಿನ ಜಗಳ ಬೀದಿಗೆ ಬಂದ ಹಿನ್ನಲೆಯಲ್ಲಿ ಕಾಂಗ್ರೇಸ್ ಕಛೇರಿಯ ಪಕ್ಕದ ರಸ್ತೆಯಲ್ಲಿ ವಾಹನ ದಟ್ಟಣೆಗೂ ಕಾರಣವಾಗಿದೆ.
ಬಳಿಕ ಕಾಂಗ್ರೇಸ್ ನ ಇತರ ಮುಖಂಡರ ಮಧ್ಯಪ್ರವೇಶದಿಂದ ಇಬ್ಬರು ಮುಖಂಡರ ಜಗಳಕ್ಕೆ ಬ್ರೇಕ್ ಬಿದ್ದಿದೆ.
ಆದರೆ ಈ ಹೊಡೆದಾಟ ಮುಂದಿನ ಕಾಂಗ್ರೇಸ್ ಸಭೆಯಲ್ಲಿ ಮತ್ತೆ ಮುಂದುವರಿಯುವ ಸಾಧ್ಯತೆಯಿದೆಯೆಂದು ಹೊಡೆದಾಟದಲ್ಲಿ ಭಾಗಿಯಾ
ದ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.