DAKSHINA KANNADA
ಮಂಗಳೂರಿನಲ್ಲಿ ಗುಂಡು ಹಾರಿಸಿ ಬೀದಿ ನಾಯಿ ಹತ್ಯೆ..!

ಮಂಗಳೂರು, ಜುಲೈ 02: ಮಂಗಳೂರು ನಗರದಲ್ಲಿ ಹೀನಾಯ ಕೃತ್ಯ ನಡೆದಿದ್ದು. ನಗರದ ಶಿವಭಾಗ್ ಬಳಿಯ ರಸ್ತೆಯಲ್ಲಿ ಬೀದಿ ನಾಯಿಯೊಂದನ್ನು ಗುಂಡು ಹೊಡೆದು ಸಾಯಿಸಲಾಗಿದೆ.
ಶಿವಭಾಗ್ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಬೀದಿ ನಾಯಿಗೆ ವ್ಯಕ್ತಿಯೊಬ್ಬ ಗುಂಡುಹಾರಿಸಿ ಹತ್ಯೆ ಮಾಡಿದ ಈ ಪ್ರಕರಣ ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ.

ಸ್ಥಳೀಯ ವ್ಯಕ್ತಿಯೊಬ್ಬ ಈ ಕೃತ್ಯವೆಸಗಿರುವ ಬಗ್ಗೆ ಶಂಕೆ ಇದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್ನ ಮುಖ್ಯಸ್ಥೆ ಸುಮಾ ರಮೇಶ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.