DAKSHINA KANNADA
ಹೆಣ್ಣು ಮಕ್ಕಳಿಂದ ಬೀದಿ ಭಜನೆ: ಪ್ರತಿಭಾ ಕುಳಾಯಿಗೆ ತೀಕ್ಷವಾಗಿ ಪ್ರತಿಕ್ರೀಯಿಸಿದ ಶಾಸಕ ಡಾ. ಭರತ್ ಶೆಟ್ಟಿ..!!

ಮಂಗಳೂರು : ಬಿಲ್ಲವ ನಾಯಕಿ, ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿಯ ಹೆಣ್ಣು ಮಕ್ಕಳ ಬೀದಿ ಭಜನೆ ಕುರಿತ ಹೇಳಿಕೆಗೆ ಶಾಸಕ ಶಾಸಕ ಭರತ್ ಶೆಟ್ಟಿ ಅವರು ತೀಕ್ಷ ಪ್ರತಿಕ್ರೀಯೆ ನೀಡಿದ್ದಾರೆ. ಇದು ಸಮಾಜ ಒಡೆಯುವ ಪ್ರಯತ್ನವಾಗಿದ್ದು, ಹಿಂದೂ ಸಮಾಜವನ್ನು ಒಡೆಯಬೇಕೆಂಬ ಕುತಂತ್ರ ಇದರ ಹಿಂದೆ ಇದೆ ಎಂದು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೂ ಪರಂಪರೆಯಲ್ಲಿ ಸನಾತನ ಧರ್ಮದಲ್ಲಿ ದೇವರನ್ನ ಅರ್ಥ ಮಾಡ್ಕೊಳ್ಳಿಕ್ಕೆ, ದೇವರನ್ನು ಮುಟ್ಟಲು ಹಲವಾರು ಮಾರ್ಗಗಳಿವೆ. ಧ್ಯಾನ ಮಾರ್ಗ ಕರ್ಮದ ಮಾರ್ಗನೂ ಇದೆ ಭಗವತ್ ಗೀತೆಯಲ್ಲೂ ಶ್ರೀ ಕೃಷ್ಣ ಪರಮಾತ್ಮ ಇದನ್ನು ಹೇಳಿದ್ದಾರೆ. ನನ್ನನ್ನ ನೀ ಅರಿತ್ಕೊಳ್ಬೇಕಾದ್ರೆ ಭಕ್ತಿ ಮಾರ್ಗ ಬಹಳ ಮುಖ್ಯ ಹೇಳ್ತಾರೆ. ಭಜನೆಯೂ ಭಕ್ತಿಯ ಒಂದು ಮಾರ್ಗವಾಗಿದೆ. ಇದರ ಬಗ್ಗೆ ಕ್ಷುಲ್ಲಕ ಮಾತಾನಾಡುವುದು ಸರಿಯಲ್ಲ, ಯಾರು ಈ ಭಕ್ತಿಯಲ್ಲಿ ಕುಣಿತ ಭಜನೆ ಮಾಡುತ್ತಾರೆ ಅವರಲ್ಲಿ ಇವರು ಪ್ರಶ್ನೆ ಮಾಡಿದ ಹಾಗೇ ಕಾಣುತ್ತಿದೆ. ಭಕ್ತಿ ಮಾರ್ಗದಲ್ಲಿ ಬಡವರು ಶ್ರೀಮಂತರು ಎಂಬ ಪ್ರಶ್ನೆ ಬರೋದಿಲ್ಲ. ಕೋಟ್ಯಾಧಿಪತಿಗಳು ತಮ್ಮಲ್ಲಿರುವ ಎಲ್ಲಾ ಆಸ್ತಿ ಬಿಟ್ಟು ಶ್ರೀಕೃಷ್ಣನ ಭಕ್ತಿ ಹಿಂದೆ ಹೋಗುವುದನ್ನು ಇಸ್ಕೋನ್ ನಲ್ಲಿ ನೋಡಿದ್ದೇವೆ .ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ನೊಡಿದ್ದೇವೆ. ಆದ್ದರಿಂದ ಇದು ಸಮಾಜ ಒಡೆಯುವ ಪ್ರಯತ್ನವಾಗಿದ್ದು, ಹಿಂದೂ ಸಮಾಜವನ್ನು ಒಡೆಯಬೇಕೆಂಬ ಕುತಂತ್ರ ಇದರ ಹಿಂದೆ ಇದೆ ಎಂದು ಆರೋಪಿಸಿದ್ದಾರೆ.

ಉಳ್ಳಾಲ ಹಳಿ ಮೇಲೆ ಕಲ್ಲು ಪ್ರಕರಣ ಉನ್ನತ ಮಟ್ಟದ ತನಿಖೆ ಅಗತ್ಯ..
ಉಳ್ಳಾಲದ ರೈಲು ಹಳಿಗಳಲ್ಲಿ ಜಲ್ಲಿಕಲ್ಲುಗಳನ್ನು ಇಟ್ಟ ವಿದ್ವಾಂಸಕ ಕೃತ್ಯದ ಬಗ್ಗೆ ಮಾತನಾಡಿದ ಅವರು ಜನರಿಗೆ ಜೀವ ಹಾನಿ ಮಾಡಬೇಕೆಂಬ ಉದ್ದೇಶ ಇದರ ಹಿಂದೆ ಅಡಗಿದೆ. ಕೇಂದ್ರ ಸರಕಾರದ ಹೆಸರು ಹಾಳು ಮಾಡಬೇಕೆಂಬ ಪ್ರಯತ್ನ ಸಂಘಟಿತ ವಾಗಿ ನಡೆಸುತ್ತಿರುವುದು ಕಣ್ಮುಂದೆ ಬರ್ತಿದೆ. ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ..
ಭಜನೆ ಹೆಸರಲ್ಲಿ ಹಿಂದುಳಿದ, ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳನ್ನು ಬೀದಿಗಳಲ್ಲಿ ಕುಣಿಸಲಾಗುತ್ತಿದೆ – ಪ್ರತಿಭಾ ಕುಳಾಯಿ
https://wp.me/pcZJEB-pik