LATEST NEWS
ಪುಣೆಯಲ್ಲೊಂದು ಕೌತುಕ, ನಡು ರಸ್ತೆಯಲ್ಲಿ ಸಾಗುತ್ತಿದ್ದ ಟ್ರಕ್ ಇದ್ದಕ್ಕಿದ್ದಂತೆ ಮಾಯ..!!?
ಪುಣೆ : ರಸ್ತೆಯಲ್ಲಿ ಸಾಗುತ್ತಿದ್ದ ಟ್ರಕ್ಕೊಂದು ಇದ್ದಕ್ಕಿದ್ದಂತೆ ಮಾಯವಾದ ಘಟನೆ ಪುಣೆ ನಗರದಲ್ಲಿ ನಡೆದಿದೆ. ರಸ್ತೆಯಲ್ಲಿ ಏಕಾಏಕಿ ಕುಸಿದು ದೊಡ್ಡ ಗುಂಡಿ ಸೃಷ್ಟಿಯಾಗಿ ಅತೀ ದೊಡ್ಡ ಟ್ರಕ್ ಸೆಕೆಂಡ್ ಅಂತರದಲ್ಲಿ ಮಾಯವಾಗಿದೆ.
ಪುಣೆಯ ಮುನ್ಸಿಪಲ್ ಕಾರ್ಪೋರೇಶನ್ ನೀರಿನ ಟ್ಯಾಂಕರ್ ರಸ್ತೆಯಲ್ಲಿ ಸಾಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾಗಿದೆ. ಬುಧ್ವಾರ್ ಪೇಠ್‌ನಲ್ಲಿ ಈ ಘಟನೆ ನಡೆದಿದ್ದು ನೀರು ತುಂಬಿದ ಲಾರಿ ಸಾಗುತ್ತಿದ್ದಂತೆ ರಸ್ತೆಯಲ್ಲಿ ಏಕಾಏಕಿ ಅತೀ ದೊಡ್ಡ ಸಿಂಕ್ ಹೋಲ್ ಸೃಷ್ಟಿಯಾಗಿದೆ. ಪರಿಣಾಮ ಒಂದೇ ಸೆಕೆಂಡ್‌ನಲ್ಲಿ ಚಲಿಸುತ್ತಿದ್ದ ಟ್ರಕ್ ಈ ದೊಡ್ಡ ಗುಂಡಿಯೊಳಗೆ ಬಿದ್ದಿದೆ. ಅದೃಷ್ಠವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪುಣೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಈ ಟ್ರಕ್ಕನ್ನು ಹೊರಗೆಳೆದಿದೆ. ಅದೃಷ್ಠವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಸಿಂಕ್ ಹೋಲ್ ಸೃಷ್ಟಿಯಾಗಿರುವ ಸ್ಥಳದಲ್ಲಿ ಹಳೇ ಭಾವಿಯೊಂದು ಇತ್ತು. ಈ ಬಾವಿಯನ್ನು ಮಣ್ಣಿನಿಂದ ಮುಚ್ಚಿ ಮೇಲೆ ಕಾಂಕ್ರೀಟ್ ಹಾಕಲಾಗಿದೆ. ಆದರೆ ನೀರು ಸೋರಿಕೆಯಿಂದ ಮಣ್ಣು ಸಡಿಲಗೊಂಡು ಈ ಸಿಂಕ್ ಹೋಲ್ ಸೃಷ್ಟಿಯಾಗಿದೆ ಎಂದು ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಕಮಿಷನರ್ ರಾಜೇಂದ್ರ ಬೋಸಲೆ ಹೇಳಿದ್ದಾರೆ. ಪ್ರಧಾನ್ ದಾಕ್ ಘರ್ ಬಳಿಕ ಹಲವು ಬಾರಿ ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಕಚೇರಿಗೆ ನೀರು ಲೀಕೆಜ್ ದೂರುಗಳು ಬಂದಿದೆ. ಈ ವೇಳೆ ನೀರು ಸೋರಿಕೆಗೆ ಕ್ರಮ ಕೈಗೊಳ್ಳಲಾಗಿತ್ತು. ಹಳೇ ಭಾವಿ ಇರುವ ಸ್ಥಳದಲ್ಲೇ ಈ ನೀರುಗಳ ಸೋರಿಕೆಯಿಂದ ಮಣ್ಣು ಸವೆದು ಈ ಸಿಂಕ್ ಹೋಲ್ ಸೃಷ್ಟಿಯಾಗಿದೆ. ಇದು ನೀರು ತುಂಬಿದ ಲಾರಿಯ ಭಾರ ತಡೆದುಕೊಳ್ಳಲು ಸಾಧ್ಯವಾಗದೆ ಸಡಿಲಗೊಂಡು ಸಿಂಕ್ ಹೋಲ್ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
#WATCH | Maharashtra | A truck fell into a pit upside down in the premises of the city post office in the Budwar Peth area of Pune city after a portion of the premises caved in. The truck belongs to the Pune municipal corporation and was there for drainage cleaning work. No… pic.twitter.com/fVir7d1rea
— ANI (@ANI) September 20, 2024