Connect with us

    DAKSHINA KANNADA

    ಫೊಟೋ ಫೋಸ್ ನಿಲ್ಲಿಸಿ: ಜನರ ಕಷ್ಟಕ್ಕೆ ಸ್ಪಂದಿಸಿ

    ಫೊಟೋ ಫೋಸ್ ನಿಲ್ಲಿಸಿ: ಜನರ ಕಷ್ಟಕ್ಕೆ ಸ್ಪಂದಿಸಿ:

    ಮಂಗಳೂರು,ಅಕ್ಟೋಬರ್ 5: ಮಂಗಳೂರಿನ ಬೆಂದೂರ್ ವೆಲ್ ವೃತ್ತದಿಂದ ಕರಾವಳಿ ವೃತ್ತದವರೆಗಿನ ರಸ್ತೆ ದುರಸ್ತಿ ಹಾಗೂ ಡಾಮರೀಕರಣಕ್ಕೆ ಹಾಗೂ ನವೀಕೃತ ನೀರಿನ ಪೈಪ್ ಅಳವಡಿಸುವಂತೆ ಒತ್ತಾಯಿಸಿ ನಾಗರಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮಳೆಗಾಲ ಅರಂಭವಾದಾಗಿನಿಂದ ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯನ್ನು ಸರಿಪಡಿಸುವ ಗೋಚಿಗೂ ಮಂಗಳೂರು ಮಹಾನಗರ ಪಾಲಿಗೆ ಹೋಗಿಲ್ಲ. ರಸ್ತೆಯಲ್ಲಿರುವ ಹೊಂಡಗಳಿಗೆ ಬಿದ್ದು ನೂರಾರು ದ್ವಿಚಕ್ರ ವಾಹನಗಳ ಸವಾರರು ಗಾಯಗೊಂಡಿದ್ದಾರೆ. ಹಲವು ವಾಹನಗಳು ಕೆಟ್ಟು ಹೋಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಈ ಬಗ್ಗೆ ಗಮನವನ್ನೇ ಹರಿಸದ ಮೇಯರ್ ವಿರುದ್ಧ ಹರಿಹಾಯ್ದರು.ಮೇಯರ್ ಸಾಹೇಬರು ರೈಡ್ ಎನ್ನುವ ನೆಪದಲ್ಲಿ ಮಾಧ್ಯಮಗಳಿಗೆ ಫೋಸ್ ಕೊಡುವುದನ್ನು ಬಿಟ್ಟು ನಾಗರಿಕರು ಅನುಭವಿಸುತ್ತಿರುವ ಇಂಥಹ ಸಮಸ್ಯೆಗಳ ಬಗ್ಗೆ ಮೊದಲು ಸ್ಪಂದಿಸಲಿ ಎಂದು ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ವಕೀಲ ಎಸ್.ಪಿ. ಚಂಗಪ್ಪ , ಮೇಯರ್ ಗೆ ಸಲಹೆ ನೀಡಿದರು.ಮಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಸರಿಪಡಿಸುವ ಯೋಗ್ಯತೆ ಮಹಾನಗರ ಪಾಲಿಕೆಗೆ ಇಲ್ಲವೆಂದಾದರೆ, ಜನರಿಂದ ತೆರಿಗೆ ಸಂಗ್ರಹಿಸುವುದನ್ನು ನಿಲ್ಲಿಸಲಿ ಎಂದು ಅವರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ ಒಂದು ತಿಂಗಳಿನಿಂದ ಈ ರಸ್ತೆಯಲ್ಲಿ ಅರ್ಧ ವ್ಯಕ್ತಿ ಮುಳುಗುವಷ್ಟು ರೀತಿಯ ಹೊಂಡಗಳಿದ್ದರೂ, ಅದನ್ನು ಮುಚ್ಚುವ ಕಾರ್ಯವನ್ನೂ ಪಾಲಿಗೆ ಮಾಡಿಲ್ಲ. ಜನರ ಕಣ್ಣಿಗೆ ಮಣ್ಣೆರೆಚುವ ನಿಟ್ಟಿನಲ್ಲಿ ಸಣ್ಣ ಪುಟ್ಟ ಹೊಂಡಗಳಿಗೆ ಮಣ್ಣನ್ನು ಹಾಕುವ ಮೂಲಕ ಧೂಳಿನ ಸಮಸ್ಯೆಯನ್ನೂ ಪಾಲಿಗೆ ತಂದೊಡ್ಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲೆಗೆ ರಾಜಕೀಯ ನಾಯಕರು ಹಾಗೂ ಸಚಿವರು ಬರುವಾಗ ಹೊಂಡ ಮುಚ್ಚುವ ಪಾಲಿಕೆಗೆ ಜನರು ಪ್ರತಿನಿತ್ಯ ಅನುಭವಿಸುತ್ತಿರುವ ತೊಂದರೆ ಕಾಣುತ್ತಿಲ್ಲ.

    ಮುಂದಿನ 15 ದಿನಗಳ ಒಳಗೆ ರಸ್ತೆಯ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ದುರಸ್ತಿ ಮಾಡದೇ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ನೀಡಿದರು.ಪ್ರತಿಭಟನೆಯಲ್ಲಿ ರಿಕ್ಷಾ ಚಾಲಕರು,ನಾಗರಿಕರು ಪಾಲ್ಗೊಂಡಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *