Connect with us

MANGALORE

ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಕಾಮಗಾರಿಯ ಭೂಮಿ ಪೂಜೆ

ಮಂಗಳೂರು ಮಾರ್ಚ್ 14: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 26 ನೇ ದೇರೆಬೈಲು ನೈರುತ್ಯ ವಾರ್ಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ನಿರ್ಮಾಣದ ಕುರಿತು ಈ ಹಿಂದೆ ಸಮುದಾಯದ ಮುಖಂಡರಿಗೆ ನೀಡಿದ್ದ ಭರವಸೆಯಂತೆ 75 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮಾನ್ಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಸಹಕಾರದೊಂದಿಗೆ ಸರಕಾರದ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು.

ಮುಂಬರುವ ದಿನಗಳಲ್ಲಿ ಸಮುದಾಯ ಭವನವು ಸಮಾಜದ ಬಂಧುಗಳ ಉಪಯೋಗಕ್ಕಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಪೂರ್ಣಿಮಾ, ಸ್ಥಳೀಯ ಕಾರ್ಪೋರೇಟರ್ ಗಣೇಶ್ ಕುಲಾಲ್, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಜಯಪ್ಪ, ಉಪಾಧ್ಯಕ್ಷ ಚನ್ನ ಬಸಪ್ಪ ರೊಟ್ಟಿ, ಪ್ರಧಾನ ಕಾರ್ಯದರ್ಶಿ ವಿವೇಕ್ ಶೆಟ್ಟರ್, ಜೊತೆ ಕಾರ್ಯದರ್ಶಿ ಸುನಂದಾ, ಎಚ್ ಎಸ್ ಗುರುಮೂರ್ತಿ, ಪ್ರದೀಪ್ ಜೆ.ಬಿ, ರುದ್ರಪ್ಪ, ರೂಪಾ ಮಲ್ಲಿಕಾರ್ಜುನ, ತೋಟೇ ಗೌಡ್ರು, ಮಂಗಳ, ಕವಿತಾ ಮುರುಗೇಶ್, ರಾಜೇಂದ್ರಪ್ಪ, ವೀರಣ್ಣ, ಧರ್ಮರಾಜ್, ಸುಷ್ಮಾ, ಲತಾ ಪ್ರಸನ್ನ, ಶಿವಪ್ಪ, ಶಿವಪ್ರಕಾಶ್, ಬಸವರಾಜ್, ಜೀವನ್, ಕರಿ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *