LATEST NEWS
ಕೇವಲ 5 ನಿಮಿಷದಲ್ಲಿ 4 ಲಕ್ಷ ಕೋಟಿ ರೂಪಾಯಿ ನಷ್ಟ

ಕೇವಲ 5 ನಿಮಿಷದಲ್ಲಿ 4 ಲಕ್ಷ ಕೋಟಿ ರೂಪಾಯಿ ನಷ್ಟ
ಹೊಸದಿಲ್ಲಿ ಅಕ್ಟೋಬರ್ 11: ಇಂದು ಶೇರುಮಾರುಕಟ್ಟೆ ಪಾಲಿಗೆ ಕರಾಳ ಗುರುವಾರವಾಗಿ ಮಾರ್ಪಟ್ಟಿದೆ. ಶೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬಯಿ ಶೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿಮಟ್ಟದ ಕುಸಿತವನ್ನು ಅನುಭವಿಸಿದೆ.
ಕಳೆದ ರಾತ್ರಿ ಅಮೇರಿಕಾ ಶೇರು ಮಾರುಕಟ್ಟೆಯಲ್ಲಿ ಕುಸಿತದ ಬೆನ್ನಿಗೆ ಇಂದು ವಹಿವಾಟು ಆರಂಭಿಸಿದ ಬಿಎಸ್‌ಇ ಹಾಗೂ ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಶೇಕಡಾ 2.5ರಷ್ಟು ಇಳಿಕೆಯಾಗುವ ಮೂಲಕ ಶೇರು ಹೂಡಿಕೆದಾರರು ಕೇವಲ ಐದು ನಿಮಿಷಗಳಲ್ಲಿ4 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ಕಳೆದುಕೊಂಡಿದ್ದಾರೆ.

ಮುಂಬಯಿನ ಬಿಎಸ್‌ಇ ಸೆನೆಕ್ಸ್ 1000ಕ್ಕೂ ಅಂಕಗಳ ಕುಸಿತ ಕಂಡು 34,000ಕ್ಕೂ ಕೆಳಗಿನ ಅಂಕಗಳಿಗೆ ಇಳಿದಿದೆ. ಈ ಮೂಲಕ ಕಳೆದ ಆರು ತಿಂಗಳಲ್ಲೇ ಅತ್ಯಂತ ಕೆಟ್ಟ ಸೂಚ್ಯಂಕ ದಾಖಲಿಸಿದೆ. ಅತ್ತ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,000 ಅಂಕಗಳ ಸನಿಹದಲ್ಲಿದೆ.
ಏಷ್ಯಾ ಶೇರು ಮಾರುಕಟ್ಟೆಯೂ ಶೇಕಡಾ 5ರಷ್ಟು ಕುಸಿತ ಕಂಡಿದೆ. ಈ ಮುನ್ನ ಕಳೆದ ರಾತ್ರಿ ಅಮೆರಿಕ ಶೇರು ಮಾರುಕಟ್ಟೆಯೂ ಭಾರಿ ಕುಸಿತವನ್ನು ಕಂಡಿತ್ತು.