LATEST NEWS
ತಮಿಳುನಾಡು ದೇವಾಲಯದಲ್ಲಿ ಪ್ರಧಾನಿ ಮೋದಿ ತಾಯಿ ಪ್ರತಿಮೆ ಪ್ರತಿಷ್ಠಾಪನೆ..!
ಚೆನೈ : ತಮಿಳುನಾಡಿನ ದೇವಾಲಯ ಒಂದರಲ್ಲಿ ಪ್ರಧಾನಿ ಮೋದಿ ತಾಯಿಯ ಪ್ರತಿಮೆ ಅನಾವರಣಗೊಂಡಿದ್ದು ಪುದುಚೇರಿಯ ಬಿಜೆಪಿ ನಾಯಕ ವಿಕ್ಕಿ ತಮ್ಮ ಸ್ವಂತ ಖರ್ಚಿನಲ್ಲಿ ಈ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ.
ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ. ತಮಿಳುನಾಡಿನ ತಿಂಡಿವನಂ ಸಮೀಪವಿರುವ ಒಂದು ಪುಟ್ಟ ನಗರಮೈಲಂನ ಮುಖ್ಯ ದೇವಾಲಯ ಓಂ ವಿಜಯ ಮೀನಾಕ್ಷಿ ಸುಂದರೇಶ್ವರ ದೇವಾಲಯದಲ್ಲಿ ಈ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿದೆ.
ಅನೇಕ ಧಾರ್ಮಿಕ ವಿಷಯಗಳಲ್ಲಿ ಆಗಾಗ್ಗೆ ಗಮನ ಸೆಳೆಯುವ ದೇವಾಲಯ ಇದಾಗಿದೆ. ಈ ಬಾರಿ ಖ್ಯಾತ ನಿರ್ದೇಶಕ ಹಾಗೂ ನಟ ಜಿ ಮಾರಿಮುತ್ತು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ತಾಯಿಯ ಮೂರ್ತಿಗಳಿಂದಾಗಿ ಈ ದೇವಾಲಯ ಸುದ್ದಿಯಲ್ಲಿದೆ. ಈ ಪುತ್ಥಳಿಯು ದೇಶವನ್ನು ಮುನ್ನಡೆಸುವ ನಾಯಕ ಮತ್ತು ಅವರ ಕುಟುಂಬ ಸದಸ್ಯರ ಗೌರವದ ಸಂಕೇತವಾಗಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ. ಇದರ ಜೊತೆಗೆ ದೇವಸ್ಥಾನದಲ್ಲಿ ಜನಪ್ರಿಯ ನಿರ್ದೇಶಕ ಮತ್ತು ನಟ ಜಿ ಮಾರಿಮುತ್ತು ಅವರ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.ಇನ್ನು ಲೋಕಾರ್ಪಣೆ ಸಮಾರಂಭಕ್ಕೆ ದಕ್ಷಿಣ ಭಾರತ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಜಾಗ್ವಾರ್ ತಂಗಮ್ ಅವರನ್ನು ಆಹ್ವಾನಿಸಲಾಗಿತ್ತು. ಸಮಾರಂಭದ ಅಂಗವಾಗಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಸುಮಾರು 300 ಮಂದಿಗೆ ಅದ್ದೂರಿ ಔತಣವನ್ನೂ ಏರ್ಪಡಿಸಲಾಗಿತ್ತು. ದೇವಸ್ಥಾನದ ಧರ್ಮದರ್ಶಿಗಳು ಮತ್ತು ಅಧೀನಂ ಆದಿಶಂಕರ-ವಾಶುಗಿ ಬಳಗದ ನೇತೃತ್ವದಲ್ಲಿ ಸಮಾರಂಭದ ಸಂಪೂರ್ಣ ವ್ಯವಸ್ಥೆ ಮಾಡಲಾಗಿತ್ತು.ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಡಿಸೆಂಬರ್ 30, 2022 ರಂದು ತಮ್ಮ 99 ನೇ ವಯಸ್ಸಿನಲ್ಲಿ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಜಿ ಮಾರಿಮುತ್ತು ಅವರು ಸೆಪ್ಟೆಂಬರ್ 8, 2023 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.