LATEST NEWS
ಭಯೋತ್ಪಾದನಾ ಚಟುವಟಿಕೆಗೆ ರಾಜ್ಯ ಸರಕಾರದ ಪ್ರಾಯೋಜಕತ್ವ – ಅನಂತ್ ಕುಮಾರ್ ಹೆಗಡೆ
ಭಯೋತ್ಪಾದನಾ ಚಟುವಟಿಕೆಗೆ ರಾಜ್ಯ ಸರಕಾರದ ಪ್ರಾಯೋಜಕತ್ವ – ಅನಂತ್ ಕುಮಾರ್ ಹೆಗಡೆ
ಶಿರಸಿ ಡಿಸೆಂಬರ್ 14: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಿದ್ದು ಇದಕ್ಕೆ ರಾಜ್ಯ ಸರಕಾರವೇ ಪ್ರಾಯೋಜಕತ್ವ ನೀಡುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆರೋಪಿಸಿದ್ದಾರೆ.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪರೇಶ್ ಮೆಸ್ತಾ ಪ್ರಕರಣ ಸಿಬಿಐಗೆ ಒಪ್ಪಿಸಿದ್ದು ಗೊಂದಲ ಮೂಡಿಸಿದೆ ಎಂದು ಹೇಳಿದರು. ಪ್ರಕರಣವನ್ನು ಮುಚ್ಚುವ ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರ ಸಿಬಿಐಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಶಿರಸಿ ಬಂದ್ ಸಮಯದಲ್ಲಿ ಸ್ವತಃ ಪೊಲೀಸರೆ ಬೈಕ್ ಜೀಪು ಒಡೆಯುತ್ತಿರುವುದು ಸೋಶಿಯಲ್ ಮಿಡಿಯಾಗಳಿಂದ ಸಾಭಿತಾಗಿದೆ ಎಂದು ಹೇಳಿದರು. ಇದು ರಾಜ್ಯ ಸರ್ಕಾರದ ಪ್ರೇರಿತ ಭಯೋತ್ಪಾದನೆಯಾಗಿದ್ದು, ಅಮಾಯಕರ ಮೇಲೆ 307 ಹಾಕೋದರ ಮೂಲಕ ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆ ಮಾಡ್ತಿದೆ ಎಂದರು.
ಯಾವುದೇ ಕಾರಣಗಿಳಲ್ಲದೇ ಪೊಲೀಸರೇ ಕಲ್ಲೆಸೆದು ಜನರನ್ನ ಕೆಣಕಿದ್ದಾರೆ. ಸ್ವತಃ ಪೊಲೀಸರೇ ಕಲ್ಲು ತೂರಿದ್ದಾರೆ, ಹಲ್ಲೆ ಮಾಡಿದ್ದಾರೆ ಇದಕ್ಕೆ ಐಜಿಪಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯಸರಕಾರದ ವಿರುದ್ದ ಡಿಸೆಂಬರ್ 19 ರಿಂದ ಜೈಲ್ ಬರೋ ಕಾರ್ಯಕ್ರಮ ಮಾಡಲು ಮುಂದಾಗಿದ್ದು ಇದು ಉತ್ತರಕನ್ನಡ ಜಿಲ್ಲೆಯಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದರು.