LATEST NEWS
ಕನ್ನಡ ಬಾವುಟ ಹಾರಿಸಬಾರದು ಎಂದು ರಾಜ್ಯ ಸರಕಾರ ಯಾವುದೇ ಸುತ್ತೊಲೆ ಹೊರಡಿಸಿಲ್ಲ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಕನ್ನಡ ಬಾವುಟ ಹಾರಿಸಬಾರದು ಎಂದು ರಾಜ್ಯ ಸರಕಾರ ಯಾವುದೇ ಸುತ್ತೊಲೆ ಹೊರಡಿಸಿಲ್ಲ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಉಡುಪಿ ನವೆಂಬರ್ 1: ಕನ್ನಡ ಬಾವುಟ ಹಾರಿಸಬಾರದು ಎಂದು ರಾಜ್ಯ ಸರಕಾರ ಯಾವುದೇ ಸುತ್ತೊಲೆ ಹೊರಡಿಸಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಉಡುಪಿಯಲ್ಲಿ ನಡೆದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಡುಪಿಯಲ್ಲಿ ಕನ್ನಡ ಧ್ವಜ ಹಾರಿಸಿಲ್ಲ ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮುಂದಿನ ವರ್ಷ ಕನ್ನಡ ರಾಜ್ಯೋತ್ಸವದಲ್ಲಿ ಎರಡೂ ಬಾವುಟ ಗಳನ್ನು ಹಾರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇನ್ನು ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಹಂಚಿಕೆಯ ವಿಚಾರದಲ್ಲಿ ರಾಜಕೀಯವಾಗಿದೆ ಎನ್ನುವ ವಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಅವರು, ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಯನ್ನು ಕೊಡಲಾಗಿದೆ. ಪ್ರಶಸ್ತಿ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸಿಲ್ಲ. ರಾಜಕಾರಣಿಗಳಿಗೆ ರಾಜ್ಯೋತ್ಸವ ಕೊಟ್ಟಿಲ್ಲ ಎಂದರು. ಶಾಲಾ ಪಠ್ಯದಿಂದ ಟಿಪ್ಪು ಪಾಠ ರದ್ಧತಿ ಪ್ರಸ್ತಾವ ಕೈ ಬಿಡುವ ರಾಜ್ಯ ಸರ್ಕಾರ ನಿರ್ಧಾರಕ್ಕೆ ಸಂಬಂಧ ಪಟ್ಟಂತ್ತೆ ಮಾತನಾಡಿದ ಅವರು ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ.
ವಿವಾದಾದ್ಮಕ ವಿಚಾರ ಮಕ್ಕಳಿಗೆ ತಿಳಿಸಬಾರದೆಂಬೂದು ಸರಕಾರದ ಉದ್ದೇಶ. ಟಿಪ್ಪು ವಿಚಾರಗಳು ಹಿಂದೆ ಪ್ರಚಲಿತದಲ್ಲಿ ಇರಲಿಲ್ಲ. ಸಿಎಂ ಈ ಬಗ್ಗೆ ಪರಿಶೀಲನೆ ಮಾಡಬೇಕೆಂದು ಹೇಳಿದ್ದಾರೆ. ಸರಕಾರ ಈ ವರೆಗೆ ಯಾವುದೇ ನಿರ್ಣಯ ಮಾಡಿಲ್ಲ ಎಂದು ಹೇಳಿದರು.