Connect with us

KARNATAKA

ಬಜೆಟ್ ಗೂ ಮುನ್ನವೇ ಬಿಯರ್ ರೇಟ್ ಹೆಚ್ಚಿಸಿದ ರಾಜ್ಯ ಸರಕಾರ

ಬೆಂಗಳೂರು ಜನವರಿ 21: ರಾಜ್ಯ ಸರಕಾರ ಬಜೆಟ್ ಗೂ ಮುನ್ನವೇ ಬಿಯರ್ ರೆಟ್ ಏರಿಕೆ ಮಾಡಿದೆ. ಸೋಮವಾರದಿಂದಲೇ ಈ ದರ ಜಾರಿಯಾಗಿದ್ದು, ಪ್ರತಿ ಬಿಯರ್‌ ಬಾಟಲಿನ ದರವು ಕನಿಷ್ಠ 10 ರಿಂದ 50 ರೂ.ವರೆಗೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಬಿಯರ್‌ ದರ ಹೆಚ್ಚಳವು ಸೋಮವಾರದಿಂದಲೇ ಜಾರಿಯಾಗಿದ್ದು, ಸರಕಾರದ ನಡೆಯು ಗುಂಡು ಪ್ರಿಯರ ಕಣ್ಣು ಕೆಂಪಾಗಿಸಿದೆ. ಸಾಮಾನ್ಯವಾಗಿ ಬಜೆಟ್‌ನಲ್ಲಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಪರಿಷ್ಕರಿಸಲಾಗುತ್ತದೆ. ಆದರೆ, ಈ ಬಾರಿ ಬಜೆಟ್‌ ಮಂಡನೆಗೂ ಮುನ್ನವೇ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿ ದರ ಏರಿಕೆ ಮಾಡಲಾಗಿದೆ.


ಇದರೊಂದಿಗೆ ಪ್ರತಿ ಬಿಯರ್‌ ಬಾಟಲಿನ ದರವು ಕನಿಷ್ಠ 10ರಿಂದ 50 ರೂ.ವರೆಗೆ ಹೆಚ್ಚಳವಾಗಿದೆ. ಅದರಲ್ಲೂ ಆಲ್ಕೋಹಾಲ್‌ ಪ್ರಮಾಣ ಹೆಚ್ಚಿರುವ ಬಿಯರ್‌ಗಳ ಬೆಲೆಯು ಗಣನೀಯವಾಗಿ ಏರಿಕೆಯಾಗಿದೆ. ಜನಸಾಮಾನ್ಯರ ಪಾಲಿಗೆ ಕೈಗೆಟಕುವ 300 ರೂ. ಒಳಗಿನ ಕೆಲ ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ. ಜನಪ್ರಿಯ ಬ್ರ್ಯಾಂಡ್‌ಗಳಾದ ಲೆಜೆಂಡ್‌, ಪವರ್‌ಕೂಲ್‌, ಬ್ಲ್ಯಾಕ್‌ಫೋರ್ಟ್‌ ಸೇರಿದಂತೆ ಹಲವು ಬಿಯರ್‌ಗಳ ಬೆಲೆಯು ಸಾಕಷ್ಟು ಹೆಚ್ಚಳವಾಗಿದ್ದು, ದರವು ಮದ್ಯಪ್ರಿಯರ ಕಿಕ್‌ ಇಳಿಸಲಿದೆ.

ಸಕ್ಕರೆ ಬಳಕೆ ಅಥವಾ ಬಳಸದೆ ಮಾಲ್ಟ್ ಅಥವಾ ಧಾನ್ಯದಿಂದ ಹುದುಗಿಸಿದ ಮದ್ಯವನ್ನು ತಯಾರಿಸಬೇಕು. ಸಕ್ಕರೆ ಪ್ರಮಾಣ ಶೇ.25ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಬ್ರೂವರೀಸ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ. ಇನ್ನು ಮುಂದೆ ಎಲ್ಲಾ ಬ್ರೂವರೀಸ್‌ಗಳು ಬಿಯರ್‌ ತಯಾರಿಕೆಗೆ ಬಳಸುವ ಅಂಶಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ. ಸಕ್ಕರೆ ಅಂಶ ಶೂನ್ಯವಾಗಿರಬಹುದು ಆದರೆ ಶೇ.25ಕ್ಕಿಂತ ಹೆಚ್ಚು ಇರಬಾರದು. ಹೊಸ ದರಗಳು ಸೋಮವಾರದಿಂದ ಜಾರಿಗೆ ಬಂದಿವೆ. ಹೊಸ ಲೇಬಲ್‌ಗಳಿಗಾಗಿ ಬ್ರೂವರೀಸ್‌ಗಳಿಗೆ ಅಬಕಾರಿ ಇಲಾಖೆ ಫೆಬ್ರವರಿ 1 ರವರೆಗೆ ಸಮಯ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಿಯರ್‌ ಮಾರಾಟದಿಂದ ಸರಕಾರಕ್ಕೆ ಹೆಚ್ಚಿನ ಆದಾಯವಿಲ್ಲ. ಐಎಂಎಲ್‌ ಮಾರಾಟ ಜಾಸ್ತಿಯಾದರೆ ದುಪ್ಪಟ್ಟು ಆದಾಯ ಬರುತ್ತದೆ. ಈ ಕಾರಣಕ್ಕೆ ಸರಕಾರ, ಬಿಯರ್‌ ಮಾರಾಟ ನಿರುತ್ತೇಜನಗೊಳಿಸಿ ಐಎಂಎಲ್‌ ಮಾರಾಟ ಹೆಚ್ಚಳವನ್ನು ಪ್ರೋತ್ಸಾಹಿಸುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *