LATEST NEWS
ರಾಜ್ಯದಲ್ಲೇ ಪ್ರಥಮ ಬಾರಿಗೆ ಕೊರೊನಾ ಸೊಂಕಿತೆ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ
ಉಡುಪಿ ಜೂನ್ 17: ರಾಜ್ಯದಲ್ಲೆ ಪ್ರಥಮಬಾರಿಗೆ ಕೊರೊನಾ ಸೊಂಕಿತೆ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ ಮಾಡಲಾಗಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ತುಂಬು ಗರ್ಭಿಣಿಗೆ ಉಡುಪಿ ಟಿಎಂ ಎ ಪೈ ಕೋವಿಡ್ 19 ಆಸ್ಪತ್ರೆಯ ತಜ್ಞ ವೈದ್ಯರು ಬುಧವಾರ ಹೆರಿಗೆ ಮಾಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಕೋವಿಡ್ ರೋಗಿಗೆ ಇದು ಪ್ರಥಮ ಸಿಜೇರಿಯನ್ ಹೆರಿಗೆ ಎಂಬ ದಾಖಲೆಯಾಗಿದೆ.
ಇನ್ನು ಈ ಕುರಿತಂತೆ ಮಾಹಿತಿ ನೀಡಿದ ವೈದ್ಯರು ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ್ದೇವೆ. ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಾಣಂತಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮಗುವಿನ ತಪಾಸಣೆ ಇನ್ನಷ್ಟೆ ಆಗಬೇಕಿದೆ.
ಸಾಮಾನ್ಯವಾಗಿ ಗರ್ಭದಲ್ಲಿದ್ದಾಗ ಮಗುವಿಗೆ ಸೋಂಕು ತಗಲುವುದಿಲ್ಲ. ಹೆರಿಗೆ ನಂತರವೂ ತಾಯಿ-ಮಗುವನ್ನು ದೂರ ಇಟ್ಟಿದ್ದೇವೆ. ಎನ್ಐಸಿಯುನಲ್ಲಿ ಇಟ್ಟು ಮಗುವನ್ನು ಪೋಷಣೆ ಮಾಡುತ್ತಿದ್ದೇವೆ. ಹಾಲುಣಿಸುವಾಗ ಬಹಳ ಮುಂಜಾಗ್ರತಾ ಕ್ರಮ ವಹಿಸುತ್ತಿರುವುದಾಗಿ ಉಡುಪಿ ಕೋವಿಡ್ 19 ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.