LATEST NEWS
ಕರಾವಳಿ ಆಗಸದಲ್ಲಿ ಕಾಣಿಸಿದ ಸ್ಟಾರ್ ಲಿಂಕ್ ನ ಉಪಗ್ರಹಗಳ ಸರತಿ ಸಾಲು
ಉಡುಪಿ: ಕರಾವಳಿ ಬಾನಿನಲ್ಲಿ ಸೋಮವಾರ ರಾತ್ರಿ ವಿಚಿತ್ರ ರೀತಿಯ ಹಣತೆಗಳ ಸಾಲು ಕಾಣಿಸಿದೆ. ನಕ್ಷತ್ರಗಳ ಗುಂಪೊಂದು ಸರತಿ ಸಾಲಿನಲ್ಲಿ ಚಲಿಸುತ್ತಿದ್ದಂತೆ ಕಂಡಿದ್ದು, ಜನರನ್ನು ನಿಬ್ಬೆರಗಾಗಿಸಿದೆ.
ಆದರೆ ಇದು ನಕ್ಷತ್ರಗಳ ಗುಂಪು ಅಲ್ಲ ಬದಲಾಗಿ ಬಾಹ್ಯಾಕಾಶ ಉದ್ಯಮಿ ಎಲೋನ್ ಮಾಸ್ಕ್ ಅವರ ಸ್ಪೇಸ್ ಎಕ್ಸ್ ಕಂಪೆನಿಯ ಉಪಗ್ರಹಗಳ ಸರತಿ ಸಾಲು. ಎಲೋನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿಗೆ ಸೇರಿದ ಉಪಗ್ರಹಗಳು ಇವು. ಸ್ಟಾರ್ ಲಿಂಕ್ ಕಂಪನಿಯು ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ಇಂತಹ ಉಪಗ್ರಹಗಳನ್ನು ನಭಕ್ಕೆ ಬಿಡುಗಡೆ ಮಾಡಿದೆ. ಈ ಪೈಕಿ 52 ಉಪಗ್ರಹ ಒಂದೇ ದಿನ ಉಡಾವಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಸುಮಾರು 1,800 ಇಂಟರ್‌ನೆಟ್ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ತಯಾರಿ ನಡೆಸಲಾಗುತ್ತಿದ್ದು, ಮುಂದೊಂದು ದಿನ ವಿಶ್ವಕ್ಕೆ ಉಚಿತ ಅಥವಾ ಬಹಳ ಕಡಿಮೆ ಮೊತ್ತಕ್ಕೆ ಇಂಟರ್‌ನೆಟ್ ಲಭ್ಯ ಆಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಇಂಟರ್‌ನೆಟ್ ಸುಲಭವಾಗಿ ಜನರ ಮೊಬೈಲ್ ಕಂಪ್ಯೂಟರ್‌ಗಳಿಗೆ ಕೊಡಿಸುವ ಉದ್ದೇಶ ಸಂಸ್ಥೆಗೆ ಇದೆ.
ಬಾಹ್ಯಾಕಾಶ ಉದ್ಯಮಿ ಎಲಾನ್ ಮಸ್ಕ್ ಅವರ ‘ಸ್ಟಾರ್ ಲಿಂಕ್’ಎಂಬ ಸುಮಾರು 12 ಸಾವಿರ ಕೃತಕ ಉಪಗ್ರಹಗಳನ್ನುಆಕಾಶಕ್ಕೆ ಹಾರಿ ಬಿಡುವ ಭಾರಿ ಯೋಜನೆಯೊಂದನ್ನು ಸದ್ಯ ಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ರೀತಿ ಹಾರಿಬಿಡುವ ಉಪಗ್ರಹಗಳ ಸಂಖ್ಯೆ 42 ಸಾವಿರ ದಾಟುವ ಸಾಧ್ಯತೆಯೂ ಇದೆ. ಅದರಂತೆ ಈಗಾಗಲೇ ಕೃತಕ ಉಪಗ್ರಹಗಳ ಒಂದು ಗುಚ್ಛ (60 ಉಪಗ್ರಹಗಳು) ನ್ನು ಹಾರಿಬಿಟ್ಟಿದ್ದಾರೆ. ಅವು ಭೂಮಿಯ ಸುತ್ತ ತಿರುಗುತ್ತಾ ಪ್ರತಿ ಮನೆಗೂ ವಯರ್‌ಲೆಸ್ ಇಂಟರ್‌ನೆಟ್ ಸೇವೆಯನ್ನು ನೀಡಲಿವೆ.
ಈ ಕೌತುಕವನ್ನು ಉಡುಪಿ , ದ.ಕ ಸೇರಿದಂತೆ ಕರಾವಳಿಯ ಎಲ್ಲೆಡೆ ಈ ಕೌತುಕ ಕಾಣಿಸಿದ್ದು, ಕುತೂಹಲ ಜನರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಚಿತ್ರೀಕರಿಸಿದ್ದು ಜನರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಚಿತ್ರೀಕರಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.