LATEST NEWS
ಬೋಟ್ ಮೂಲಕ ಆಗಮಿಸಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿಧ್ಯಾರ್ಥಿಗಳು

ಮಂಗಳೂರು, ಜೂ. 27: ಕೊರೊನಾ ನಡುವೆ ಕರ್ನಾಟಕದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ಯಾವುದೇ ತೊಂದರೆ ಇಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ಕೊರೊನಾ ಕಾರಣದಿಂದಾಗಿ ಬೆಂಗ್ರೆ ಪ್ರದೇಶದಿಂದ ಜನಸಂಚಾರಕ್ಕೆ ಬಳಸುವ ಬೋಟ್‌ಗಳನ್ನು ಬಂದ್ ಮಾಡಲಾಗಿತ್ತು.
ಆದರೆ ಎಸ್‌ಎಸ್‌ಎಲ್‌ಸಿ ಪ್ರಾರಂಭವಾದ ಹಿನ್ನಲೆ ವಿದ್ಯಾರ್ಥಿಗಳು ರಸ್ತೆ ಮಾರ್ಗವಾಗಿ ಸುತ್ತು ಬಳಸಿ ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕಾಗಿತ್ತು. ಅದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಬೋಟ್ ಪ್ರಯಾಣ ಆರಂಭಿಸಲಾಗಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸಲು ದ್ವೀಪ ಪ್ರದೇಶವಾಗಿರುವ ತೋಟಬೆಂಗ್ರೆಯ 15 ಕ್ಕೂ ಅಧಿಕ ವಿದ್ಯಾರ್ಥಿಗಳು ಬೋಟ್‌ನಲ್ಲಿ ಪ್ರಯಾಣ ಮಾಡಿ ನಗರಕ್ಕೆ ಆಗಮಸಿದ್ದಾರೆ. ಬೋಟ್ ಪ್ರಯಾಣದ ಬಳಿಕ ಆಟೋ ರಿಕ್ಷಾ ಮೂಲಕ ವಿಧ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲಿದ್ದಾರೆ.
