LATEST NEWS
ಶ್ರೀಲಂಕಾ ಹಿಂಸಾಚಾರಕ್ಕೆ ಸಂಸದ ಸಾವು…!!
ಕೊಲಂಬೊ: ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಇದೀಗ ಹಿಂಸಾಚಾರ ಭುಗಿಲೆದ್ದಿದ್ದು, ಸರಕಾರದ ಪರ ಮತ್ತು ವಿರೋಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಒಬ್ಬ ಸಂಸದ ಸೇರಿದಂತೆ 5 ಮಂದಿ ಸಾವನಪ್ಪಿದ್ದಾರೆ.
ಪೊಲನ್ನರುವಾ ಜಿಲ್ಲೆಯ ವೀರಕೇತಿಯಾ ಪಟ್ಟಣದಲ್ಲಿ ಸೋಮವಾರ ಸರ್ಕಾರಿ ವಿರೋಧಿ ಗುಂಪುಗಳು ಕಾರಿನಲ್ಲಿ ತೆರಳುತ್ತಿದ್ದ ಎಸ್ಎಲ್ಪಿಪಿ ಸಂಸದ ಅಮರಕೀರ್ತಿ ಅತುಲಕೊರಲಾ(57) ಅವರ ಕಾರನ್ನು ಸುತ್ತುವರಿದವು. ಈ ವೇಳೆ ಎಸ್ಯುವಿ ಕಾರಿನಿಂದ ಗುಂಡು ಹಾರಿದ ಸದ್ದು ಕೇಳಿತು. ಆಕ್ರೋಶಗೊಂಡ ಪ್ರತಿಭಟನಕಾರರು ಕಾರನ್ನು ಪಲ್ಟಿ ಮಾಡಿದರು. ಕಾರಿನಿಂದ ತಪ್ಪಿಸಿಕೊಂಡ ಸಂಸದ ಸಮೀಪದ ಕಟ್ಟಡವೊಂದಕ್ಕೆ ತೆರಳಿ ಅವಿತುಕೊಂಡಿದ್ದರು. ಸಾವಿರಾರು ಪ್ರತಿಭಟನಕಾರರು ಕಟ್ಟಡವನ್ನು ಸುತ್ತುವರಿದಾಗ ಸಂಸದ ಇಬ್ಬರ ಮೇಲೆ ಗುಂಡು ಹಾರಿಸಿದರು. ಈ ವೇಳೆ 27 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಬಳಿಕ ಸಂಸದರು ತಾವೇ ಗುಂಡು ಹಾರಿಸಿಕೊಂಡಿದ್ದಾರೆ. ಇದೇ ವೇಳೆ ಆಡಳಿತ ಪಕ್ಷದ ರಾಜಕಾರಣಿಯೊಬ್ಬರು ಸರ್ಕಾರದ ವಿರೋಧ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಸುಮಾರು 200 ಮಂದಿ ಗಾಯಗೊಂಡಿದ್ದು 181 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.