Connect with us

LATEST NEWS

ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ?

ಮಂಗಳೂರು ಎಪ್ರಿಲ್ 12: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿಯನ್ನು ಕಿತ್ತೊಗೆಯಿರಿ ಹೇಳಿಕೆಗೆ ಸಚಿವ ಶ್ರೀರಾಮುಲು ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಎಂದು ಪ್ರಶ್ನಿಸಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸಾಗಿದ್ದಾರೆ. ಹೀಗಾಗಿ ಬಿಜೆಪಿಯನ್ನು ಕಿತ್ತೊಗೆಯಿರಿ ಎಂದು ಹೇಳಿದ್ದು, ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ?, ಬಿಜೆಪಿ ರಾಜ್ಯದಲ್ಲಿ ದೇಶದಲ್ಲಿ ಆಲದ ಮರವಾಗಿ ಬೆಳೆದಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದೆ. ಪ್ರಧಾನಿ ಮೋದಿ ದೇಶಕ್ಕೆ ಸಮರ್ಥ ನಾಯಕರಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಯಾರಿಗೂ ಬೇಡವಾದ ಪಕ್ಷವಾಗಿದೆ. ಐವತ್ತು ವರ್ಷವನ್ನು ಆಳಿದ ಕಾಂಗ್ರೆಸ್ ಪಕ್ಷವನ್ನು ದೇಶ ತಿರಸ್ಕಾರ ಮಾಡಿದೆ.

2023ರಲ್ಲಿ ಜನ ಆಲದಮರಕ್ಕೆ ನೀರೆರೆಯುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತಾರೆ. ರಾಜ್ಯದಲ್ಲಿ ಭಾವನಾತ್ಮಕ ಸಂಬಂಧ ಬೆಳೆಯುತ್ತಿದೆ. ಬೆಳವಣೆಗೆಗಳ ಬಗ್ಗೆ ಮುಖ್ಯಮಂತ್ರಿ ಗಳು ಸ್ಪಷ್ಟ ಉತ್ತರ ನೀಡಿದ್ದಾರೆ. ಎಲ್ಲಾ ಧರ್ಮೀಯರಿಗೂ ಗೌರವ ಕೊಡುವ ಕೆಲಸ‌ ಮಾಡಿದ್ದಾರೆ. ಕಾನೂನನ್ನು ಕಾಪಾಡುವ ಕೆಲಸ ಎಲ್ಲರೂ ಮಾಡಬೇಕು ಎಂದರು.

Advertisement
Click to comment

You must be logged in to post a comment Login

Leave a Reply