DAKSHINA KANNADA
ಪುಣಚದಲ್ಲೊಂದು ಮದುವೆಯ ಜೊತೆಗೆ ಪರಿಸರ ಪ್ರೇಮವನ್ನೂ ಮೆರೆದ ವಿಶಿಷ್ಟ ಮದುವೆ
ಪುಣಚದಲ್ಲೊಂದು ಮದುವೆಯ ಜೊತೆಗೆ ಪರಿಸರ ಪ್ರೇಮವನ್ನೂ ಮೆರೆದ ವಿಶಿಷ್ಟ ಮದುವೆ
ಪುತ್ತೂರು, ಜೂನ್ 21: ಅದ್ದೂರಿ, ಆಡಂಭರದ ಮದುವೆ ಸಮಾರಂಭಗಳ ಮಧ್ಯೆ ಇಲ್ಲೊಂದು ವಿಶಿಷ್ಟ ರೀತಿಯ ಮದುವೆ ಗಮನ ಸೆಳೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚದಲ್ಲಿ ನಡೆದ ಈ ಮದುವೆ ಕಾರ್ಯಕ್ಕೆ ಹೋದವರೆಲ್ಲ ಕೈಯಲ್ಲಿ ಒಂದೊಂದು ಗಿಡ ಹಿಡಿದುಕೊಂಡಿದ್ದರು.
ಹೌದು.,ಮದುವೆಗೆ ಬಂದವರಿಗೆಲ್ಲ ರಕ್ತಚಂದನ, ಶ್ರೀಗಂಧ ಸೇರಿ ಬೆಲೆಬಾಳುವ ಮರದ ಗಿಡಗಳನ್ನು ಉಚಿತವಾಗಿ ನೀಡಲಾಗಿತ್ತು.
ಬಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ಎಂಬವರ ಮದುವೆ ಪುಣಚದ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಿತ್ತು.
ಮಳೆಗಾಲ ಆಗಿದ್ದರಿಂದ ಹಣ್ಣು, ಮರದ ಗಿಡಗಳನ್ನು ಮದುವೆಗೆ ಬಂದ ಅತಿಥಿಗಳಿಗೆಲ್ಲ ಕೊಟ್ಟು ಅದನ್ನು ಪೋಷಿಸಲು ಪ್ರೇರಣೆ ನೀಡಲಾಯಿತು.
ಆ ಮೂಲಕ ಮದುವೆಯಲ್ಲೂ ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡುವಂತಾಗಿದ್ದು ಈ ಮದುವೆಯ ವಿಶೇಷತೆಯಾಗಿತ್ತು.
ಮದುವೆಗೆ ಬಂದಿದ್ದ ಸಾವಿರಾರು ಮಂದಿ ಮದುವೆಯ ಸವಿ ಭೋಜನದ ಜೊತೆಗೆ ತನ್ನ ಇಷ್ಟದ ಹಣ್ಣಿನ ಗಿಡಗಳನ್ನೂ ಕೊಂಡೊಯ್ದರು.