UDUPI
ಉಡುಪಿ ನಗರಸಭೆಗೆ ವಿಶಿಷ್ಟ ಪ್ರಶಸ್ತಿ
ಉಡುಪಿ ನಗರಸಭೆಗೆ ವಿಶಿಷ್ಟ ಪ್ರಶಸ್ತಿ
ಉಡುಪಿ ಫೆಬ್ರವರಿ 19: ಉಡುಪಿ ನಗರಸಭೆಯು ಬೀಡಿನಗುಡ್ಡೆಯಲ್ಲಿ ನಿರ್ಮಿಸಲಾದ 2 ಟನ್ ಸಾಮಥ್ರ್ಯದ ಬಯೋಮಿಥನೇಶನ್ ಘಟಕ(ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ) ಉಪಕ್ರಮಕ್ಕೆ ತ್ಯಾಜ್ಯದಿಂದ ಉತ್ಪಾದನೆಯಾದ ಗ್ಯಾಸ್‍ನಿಂದ ವಿದ್ಯುತ್ ಉತ್ಪಾದನೆಯನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಿದನ್ನು ಗುರುತಿಸಿ, ಉತ್ತಮ ಪದ್ಧತಿಗಳ ಅನುಸರಣಿಗಾಗಿ 2016-17ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಉತ್ತಮ ನಿರ್ವಹಣೆಗಾಗಿ – ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯ ಬಗ್ಗೆ ಪೌರಾಡಳಿತ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಫೆಬ್ರವರಿ 17ರಂದು ನಡೆದ ಸಮಾರಂಭದಲ್ಲಿ ಅನುಸರಣೆಗಾಗಿ ವಿಶಿಷ್ಟ ಪ್ರಶಸ್ತಿಯನ್ನು ಉಡುಪಿ ನಗರಸಭೆಗೆ ಪ್ರಧಾನ ಮಾಡಿದರು.
ಉಡುಪಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತರಾದ ಡಿ. ಮಂಜುನಾಥಯ್ಯರವರು ಹಾಗೂ ಪರಿಸರ ಅಭಿಯಂತರರಾದ ರಾಘವೇಂದ್ರ ಬಿ.ಎಸ್.ರವರು ಈಶ್ವರ ಬಿ ಖಂಡ್ರೆ, ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.