LATEST NEWS
ಸ್ಪೀಕರ್ ಖಾದರ್ ಅವರನ್ನು ಕೆಸರಗದ್ದೆಗೆ ಇಳಿಸಿದ ಯುವಕರು

ಮಂಗಳೂರು ಜುಲೈ 21: ಸ್ಪೀಕರ್ ಖಾದರ್ ಯುವಕರ ಜೊತೆ ಕೆಸರಗದ್ದೆಗೆ ಇಳಿದು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಸದ್ಯ ಸ್ಪೀಕರ್ ಖಾದರ್ ಕೆಸರಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀ ಚೀರುಂಭ ಭಗವತಿ ಕ್ಷೇತ್ರ ಮತ್ತು ಶ್ರೀ ಚೀರುಂಭ ಭಗವತಿ ತಿಯಾ ಸಮಾಜ ಸೇವಾ ಸಂಘ ಭಾನುವಾರ ಆಯೋಜಿಸಿದ್ದ ‘ತೀಯರೆ ಚೇರ್‌ಲಿ ಒರಿನಾಳ್’ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಿದರು.

ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದ ಪಕ್ಕದ ಗದ್ದೆಯಲ್ಲಿ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದ ಖಾದರ್ ಅವರು ಕೆಸರು ಗದ್ದೆಗೆ ಇಳಿದು ಓಡಾಡಿ ಗಮನ ಸೆಳೆದರು. ‘ಗದ್ದೆಗೆ ನಾನೂ ಇಳಿಯುತ್ತೇನೆ’ ಎಂದು ಹೇಳುತ್ತಲೇ ಪಾಲ್ಗೊಂಡ ಅವರು ಸಮುದಾಯದವರ ಮನರಂಜನೆಯಲ್ಲಿ ಭಾಗಿಯಾದರು.