Connect with us

KARNATAKA

ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಸಪ್ತಮಿ ಗೌಡ

ಬೆಂಗಳೂರು ಜೂನ್ 16: ರಾಘವೇಂದ್ರ ರಾಜ್ ಕುಮಾರ್ ಮಗ ಯುವರಾಜ್ ಕುಮಾರ್ ಡೈವೋರ್ಸ್ ಕೇಸ್ ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಹೆಸರು ಕೇಳಿ ಬಂದ ಹಿನ್ನಲೆ ಇದೀಗ ನಟಿ ಯುವರಾಜ್ ಕುಮಾರ್ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ವಿಚ್ಛೇದನ ಪ್ರಕರಣದಲ್ಲಿ ತಮ್ಮ ಹೆಸರು ತಂದು ನನ್ನ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನು ಪರಿಶೀಲಿಸಿದ ಕೋರ್ಟ್‌ ಮಾನಹಾನಿ ಹೇಳಿಕೆಯನ್ನು ನೀಡದಂತೆ ಆದೇಶದಲ್ಲಿ ತಿಳಿಸಿದೆ.


ಸಪ್ತಮಿ ಗೌಡ ಹಾಗೂ ಯುವ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವರ್ಷದಿಂದ ಅಫೇರ್ ಹೊಂದಿದ್ದಾರೆ. ಡಿಸೆಂಬರ್‌ 2023ರಲ್ಲಿ ನಾನು ಅಮೇರಿಕಾದಿಂದ ಭಾರತಕ್ಕೆ ವಾಪಸ್ ಆದಾಗ ಶಾಕ್ ಆಯ್ತು. ಖಾಸಗಿ ಹೋಟೆಲ್‌ ರೂಮ್‌ನಲ್ಲಿ ಸಪ್ತಮಿ ಗೌಡ ಜೊತೆ ಯುವ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಅಫೇರ್ ಮುಂದುವರೆಸುವ ಸಲುವಾಗಿ ಬಲವಂತವಾಗಿ ಓದಿನ ನೆಪವೊಡ್ಡಿ ನನ್ನನ್ನ ಅಮೇರಿಕಾಕ್ಕೆ ಕಳುಹಿಸಲಾಯಿತು ಎಂದು ಲೀಗಲ್ ನೋಟೀಸ್‌ಗೆ ನೀಡುವ ಉತ್ತರದಲ್ಲಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಈ ಕುರಿತಾಗಿ ಎಲ್ಲೆಡೆ ವರದಿ ಪ್ರಸಾರ ಆಯ್ತು. ಇದೀಗ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀದೇವಿ ಭೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

 

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ತಮ್ಮ ವಿರುದ್ಧ ಶ್ರೀದೇವಿ ಭೈರಪ್ಪ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಡಿವೋರ್ಸ್ ವಿಚಾರದಲ್ಲಿ ತಮ್ಮ ಹೆಸರನ್ನ ತಂದು ಚಾರಿತ್ರ್ಯವಧೆ ಮಾಡಲಾಗಿದೆ. ಇದರಿಂದ ತಮಗೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಆಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದರು. ಸಪ್ತಮಿ ಗೌಡ ಸಲ್ಲಿಸಿದ ಮನವಿಗೆ ಪುರಸ್ಕರಿಸಿದ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧಕಾಜ್ಞೆ ಆದೇಶಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *