DAKSHINA KANNADA
ಕೋಳಿ ಅಂಕಕ್ಕೆ ಪರ್ಮಿಶನ್ ಕೋಡಲ್ಲ – ಅನುಮತಿಗಾಗಿ ಠಾಣೆಗೆ ಬರಬೇಡಿ – ಎಸ್ಪಿ
ಮಂಗಳೂರು ಜನವರಿ 30:ಕೋಳಿ ಅಂಕಕ್ಕೆ ಯಾವುದೇ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಹೀಗಾಗ ಅನುಮತಿಗೋಸ್ಕರ ಠಾಣೆಗಳಲ್ಲಿ ಮನವಿ ಸಲ್ಲಿಸಬಾರದು ಎಂದು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು ಜೂಜಿನ ಕೋಳಿ ಅಂಕವು ಕಾನೂನುಬಾಹಿರ ಅಪರಾಧವಾಗಿದ್ದು, ಕೋಳಿ ಅಂಕವನ್ನು ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ ಹಾಗಾಗಿ ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.